Important
Trending

ಮೇಯಲು ಹೋಗಿದ್ದ ದನಕರು ತರುತ್ತಿದ್ದ ವೇಳೆ ವ್ಯಕ್ತಿಯ ಮೇಲೆ ಕರಡಿ ದಾಳಿ

ಜೊಯಿಡಾ:  ಮನೆಯ ಸಮೀಪದಲ್ಲಿ ಮೇಯಲು ಹೋಗಿದ್ದ ದನಕರುಗಳನ್ನು ತರುತ್ತಿರುವ ವೇಳೆ ವ್ಯಕ್ತಿಯೊಬ್ಬನನ್ನು  ಕರಡಿ ಗಾಯಗೊಳಿಸಿದ ಘಟನೆ ನಡೆದಿದೆ. ಬಾಪೇಲಿ ಗ್ರಾಮದ  ಕಾಳು ಭಾಬು ಪಾಟೀಲ 51 ವರ್ಷದ ವ್ಯಕ್ತಿ ಹುಲ್ಲು ಮೇಯಲು ಹೊಗಿದ್ದ ತನ್ನ ಸಾಕು ದನಕರುಗಳನ್ನು  ತರುತ್ತಿರುವ ವೇಳೆ ಎರಡು ಮರಿಗಳು ಇದ್ದ ಕರಡಿ ಗಾಯಗೊಳಿಸಿದೆ.,

36 ಸಾವಿರ ಆರಂಭಿಕ ವೇತನ: SBI ನಲ್ಲಿ 1,673 ಹುದ್ದೆಗಳು ಖಾಲಿ: ಇಂದೇ ಅರ್ಜಿ ಸಲ್ಲಿಸಿ

ಈತ ಕೆಳಗೆ ಬಿದ್ದು ಕೊಗಿಕೊಂಡಾಗ ಕರಡಿ ಇವನನ್ನು ಬಿಟ್ಟು ಕಾಡಿಗೆ ತನ್ನ ಮರಿಗಳೊಂದಿಗೆ ಓಡಿಹೊಗಿದೆ ಎಂದು ತಿಳಿದು ಬಂದಿದ್ದು, ನಂತರ ಅರಣ್ಯ ಇಲಾಖೆಯ ಡಿ ಆರ್ ಎಪ್ ಓ ವಿಠ್ಠಲ ಗುಬಚೆ ಮತ್ತು ಗಾರ್ಡ  ಪ್ರಶಾಂತ ಬಾಗಿ ಇವರು ಜೊಯಿಡಾ ತಾಲೂಕಾ ಆಸ್ಪತ್ರೆಗೆ ಗಾಯಗೊಂಡ ವ್ಯಕ್ತಿಯನ್ನು ತಂದು ಚಿಕಿತ್ಸೆ ಕೊಡಿಸಿದ್ದಾರೆ..

ವಿಸ್ಮಯ ನ್ಯೂಸ್ ಜೋಯ್ಡಾ

Back to top button