Follow Us On

WhatsApp Group
Focus News
Trending

PSI: ನೂತನ ಪಿ ಎಸ್ ಐ ಆಗಿ ಅಧಿಕಾರವಹಿಸಿಕೊಂಡ ಸುಹಾಸ್ ಆರ್

ಕೋಲಾರ ಮೂಲದ ಯುವ ಅಧಿಕಾರಿ

ಅಂಕೋಲಾ: ಅಂಕೋಲಾದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಒಟ್ಟೂ ನಾಲ್ವರು ಪಿ.ಎಸ್.ಐ (PSI) ಗಳು , ಇತ್ತೀಚೆಗೆ ಬೇರೆಡೆ ವರ್ಗವಣೆಗೊಂಡಿದ್ದರು. ಅವರಲ್ಲಿ ಓರ್ವರಾದ ಗೀತಾ ಶಿರ್ಸಿಕರ ವರ್ಗಾವಣೆಯಿಂದ ತೆರವಾದ (ತನಿಖೆ 2) ಸ್ಥಾನಕ್ಕೆ ಸುಹಾಸ್ ಆರ್ ( Suhas R ) ಇವರು ಅಧಿಕಾರ ವಹಿಸಿಕೊಂಡಿದ್ದಾರೆ. 2018ರ ಬ್ಯಾಚಿನ ಕೋಲಾರ ಮೂಲದ ಈ ಯುವ ಅಧಿಕಾರಿ, ಕುಂದಾಪುರ ಗ್ರಾಮೀಣ ಠಾಣೆಯ ಬಳಿಕ, ದಕ್ಷಿಣ ಕನ್ನಡದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿದ್ದು, ಇದೀಗ ಅಂಕೋಲಾ ಠಾಣೆಯ ಪಿ.ಎಸ್.ಐ.(ತನಿಖೆ 2 ) ಹುದ್ದೆಗೆ ವರ್ಗವಾಗಿ ಬಂದಿದ್ದಾರೆ.

ಮಂಗಳೂರಿನಲ್ಲಿ 200 ಸರ್ಕಾರಿ ಹುದ್ದೆಗಳಿಗೆ ನೇಮಕಾತಿ: SSLC, ITI, Bsc, Bcom ಆದವರು ಅರ್ಜಿ ಸಲ್ಲಿಸಬಹುದು:Apply Now

ಈ ಮೂಲಕ ಈ ಹಿಂದೆ ಇದ್ದ ಪಿ. ಎಸ್ ಐ ಪ್ರವೀಣ ಕುಮಾರ, ಮಹಾಂತೇಶ ವಾಲ್ಮೀಕಿ, ಪ್ರೇಮನಗೌಡ ಪಾಟೀಲ, ಗೀತಾ ಶಿರ್ಸಿಕರ ಅಂಕೋಲಾದಿಂದ ಇತರೆಡೆ ವರ್ಗಾವಣೆಗೊಂಡಿದ್ದು, ಅವರಿಂದ ತೆರವಾದ ಸ್ಥಾನಗಳಲ್ಲಿ ಉದ್ದಪ್ಪ ಅಶೋಕ್ ಧರೆಪ್ಪ ನವರ, ಜಯಶ್ರೀ ಪಿ , ಸುನೀಲ ಹುಲ್ಲೊಳ್ಳಿ, ಬಳಿಕ ಈದೀಗ ಸುಹಾಸ ಆರ್ ನೂತನ ಪಿಎಸ್ಐ (PSI) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಪಿ.ಎಸ್.ಐ ಗಳ ವರ್ಗಾವಣೆ ಬೆನ್ನಿಗೆ ಸಿ.ಪಿ.ಐ ಸಹ ಬದಲಾವಣೆಗೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿರುವ ಈ ವಿಚಾರಕ್ಕೆ ಸಂಬಂಧಿಸಿದಂತೆ , ಶುಕ್ರವಾರ ಸಂಜೆ ಒಳಗೆ ಅಥವಾ ಸೋಮವಾರ ರಾಜ್ಯದ ಇತರೆ ಕೆಲ ಅಧಿಕಾರಿಗಳ ವರ್ಗಾವಣೆ ಆದೇಶವೂ ಹೊರ ಬೀಳಲಿದೆ ಎನ್ನಲಾಗಿದ್ದು, ಆ ಬಳಿಕವಷ್ಟೇ ಸ್ಪಷ್ಟ ಚಿತ್ರಣ ದೊರೆಕಬೇಕಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button