ಮಾಹಿತಿ
Trending

ಪಂಚಾಯತ್ ಗೆ ಜಾನುವಾರು ತಂದು ಕಟ್ಟಿದ ಗ್ರಾಮಸ್ಥರು

ಜಾನುವಾರುಗಳಿಂದ ರೈತರಿಗೆ ನಷ್ಟ
ಪಿಡಿಒ ವಿರುದ್ಧ ಆಕ್ರೋಶ

ಕುಮಟಾ: ತಾಲೂಕಿನ ಹೆಗಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಗಳಲ್ಲಿ ಬಿಡಾಡಿ ಜಾನುವಾರುಗಳಿಂದ ತುಂಬಾ ತೊಂದರೆ ಅನುಭವಿಸುತ್ತಿರುವ ರೈತರು ಕೆಲವು ಜಾನುವಾರುಗಳನ್ನು ಹಿಡಿದು ಗ್ರಾಮ ಪಂಚಾಯಿತಿ ಗೆ ತಂದು ಎರಡು ದಿನಗಳಿಂದ ಕಟ್ಟುತ್ತಿದ್ದಾರೆಹೆಗಡೆ ಭಾಗದ ರೈತರು ಭತ್ತ ದ ಬೆಳೆಯನ್ನೇ ಅವಲಂಬಿಸಿದ್ದಾರೆ ಕಳೆದ ವರ್ಷ ನೆರೆಹಾವಳಿಯಿಂದ ಅಷ್ಟೆನು ಬೆಳೆ ಬಂದಿರಲಿಲ್ಲ ಆದರೂ ಅಲ್ಪ ಸ್ವಲ್ಪ ಬಂದ ಬೆಳೆಯಿಂದ ಜೀವನ ಸಾಗಿಸಿದ್ದರು.. ಈ ವರ್ಷ ಭತ್ತದ ನಾಟಿ ಪ್ರಾರಂಭವಾದಾಗಿನಿಂದಲೂ ಬಿಡಾಡಿ ಜಾನುವಾರುಗಳು ಹಗಲು ರಾತ್ರಿ ಎನ್ನದೇ ಗದ್ದೆಗಳಿಗೆ ನುಗ್ಗಿ ಭತ್ತದ ಸಸಿಗಳನ್ನು ತಿಂದು ರೈತರಿಗೆ ನಷ್ಟ ಉಂಟುಮಾಡುತ್ತಿರುವ ಬಗ್ಗೆ ಸಾಕಷ್ಟು ಬಾರಿ ರೈತರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಜೋಶಿ ಯವರಿಗೆ ತಿಳಿಸಿದ್ದರು ಎನ್ನಲಾಗಿದ್ದು ಆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.ಇದರಿಂದ ಸಿಟ್ಟಿಗೆದ್ದ ರೈತರು ಕೆಲವು ಜಾನುವಾರುಗಳನ್ನು ಹಿಡಿದು ಸೋಮವಾರ ಮತ್ತು ಮಂಗಳವಾರ ಪಂಚಾಯಿತಿ ಕಛೇರಿ ಎದುರು ತಂದು ಕಟ್ಟಿ ನಿಮ್ಮ ಸುಪರ್ದಿಗೆ ತೆಗೆದುಕೊಳ್ಳುವಂತೆ ಅಭಿವೃದ್ಧಿ ಅಧಿಕಾರಿ ಗೆ ತಿಳಿಸಿದರು. 


ಅದಕ್ಕೆ ಒಪ್ಪದ ಪಿಡಿಓ ನಮ್ಮ ಹತ್ತಿರ ಸಾಕಲು ಸಾಧ್ಯ ಇಲ್ಲ. ನಾವು ಈಗಾಗಲೇ ಮೈಕೋ ಮೂಲಕ ಸಾರ್ವಜನಿಕರಿಗೆ  ಯಾರೂ ಕೂಡ ಜಾನುವಾರುಗಳನ್ನು ಬಿಡಬಾರದು ಎಂದು ತಿಳಿಸಿದ್ದು ಆದರೂ ಬಿಡುತ್ತಿದ್ದಾರೆ. ನಾವು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದಾಗ ಸೇರಿದ್ದ ರೈತರು ಈ ಹಿಂದೆ ಹೆಗಡೆಯಲ್ಲಿ ಹಟ್ಟಿಕೊಟ್ಟಿಗೆ ಇತ್ತು. ನಂತರ ಸರ್ಕಾರಿ ಹಣದಲ್ಲಿ ಪಂಚಾಯಿತಿ ಆವರಣದಲ್ಲೇ ಕೊಂಡವಾಡಿ ನಿರ್ಮಿಸಲಾಗಿದ್ದು, ನೀವು ಅಲ್ಲಿ ಇವುಗಳನ್ನು ಕಟ್ಟಲು ಅವಕಾಶ ಮಾಡಿಕೊಡಿ ನಂತರ ಜಾನುವಾರುಗಳ ಮಾಲಿಕರಿಂದ ದಂಡ ವಸೂಲಿ ಮಾಡಿ ನಿಮ್ಮ ಖರ್ಚನ್ನು ಜಮಾ ಮಾಡಿಕೊಳ್ಳಿ ಈ ವ್ಯವಸ್ಥೆ ಹಿಂದೂ ಕೂಡ ಇತ್ತು ಎಂದಾಗ ಅದಕ್ಕೆ ಪಿಡಿಒ ಒಪ್ಪದಿದ್ದಾಗ ಗ್ರಾಮದ ಮೋಹನ ಶಾನಭಾಗ ಹಾಗೂ ಇತರರು ಪೋಲೀಸ್ ಅಧಿಕಾರಿ ಗಳಿಗೆ ವಿಷಯ ತಿಳಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಪೋಲೀಸ್ ಅಧಿಕಾರಿ ಗಳ ಸಮಕ್ಷಮ ರೈತರು ಪಿಡಿಒ ರವರೊಂದಿಗೆ ಮಾತುಕತೆ ನಡೆಸಿ ಪಂಚಾಯಿತಿ ಆವರಣ ದಲ್ಲಿರುವ ಕೊಂಡವಾಡಿಯಲ್ಲಿ ಜಾನುವಾರು ಕಟ್ಟಲು ಅವಕಾಶ ಕಲ್ಪಿಸಿದರು. ಆದರೆ ಆ ಕೊಂಡವಾಡಿ ಯಲ್ಲಿ ಕಸಕಡ್ಡಿ ತೆಂಗಿನ ಗರಿಗಳನ್ನು ತುಂಬಿಟ್ಟಿದ್ದನ್ನೂ ರೈತರ ಸತಃ ಖಾಲಿಮಾಡಿ ಜಾನುವಾರುಗಳಿಗೆ ತಂಗಲು ವ್ಯವಸ್ಥೆ ಮಾಡಿದರು. ಆದರೆ ಅವುಗಳಿಗೆ ಹೊಟ್ಟೆಗೆ ಹಾಕಲೂ ಕೂಡ ಪಿಡಿಒ ಒಪ್ಪಲಿಲ್ಲ ಎಂದು ರೈತರು ಅಸಮಾಧಾನ ದಿಂದ ನುಡಿಯುತ್ತಾರೆ.ಮಂಗಳವಾರ ಬೆಳಿಗ್ಗೆ ಕೂಡ ರೈತರೇ ಅವುಗಳಿಗೆ ಹುಲ್ಲು ನೀರು ನೀಡಿ ಬಂದಿದ್ದಾರೆ ಎನ್ನಲಾಗಿದೆ.

ದಯವಿಟ್ಟು ಅವುಗಳಿಗೆ ಮೇವು ನೀಡಿ ಮಾಲಿಕರಿಗೆ ದಂಡ ಹಾಕಿ ಇನ್ನು ಬಿಡದಂತೆ ಎಚ್ಚರಿಕೆ ನೀಡಿ ರೈತರಿಗೆ ನೆರವಾಗಿ ಎಂದು ಅಧಿಕಾರಿಗಳನ್ನು ವಿನಂತಿಸಿದ್ದಾರೆ.


ಈ ಸಂದರ್ಭದಲ್ಲಿ ಮೋಹನ ಶಾನಭಾಗ, ರಾಮರಾಯ ನಾಯ್ಕ, ಪರಮೇಶ್ವರ ನಾಯ್ಕ , ವೀರೇಂದ್ರ ನಾಯ್ಕ, ಗಜಾನನ ನಾಯ್ಕ, ಪುರಂದರ ನಾಯ್ಕ, ಹನುಮಂತ ನಾಯ್ಕ ಇತರ ರೈತರು ಉಪಸ್ಥಿತರಿದ್ದರು.


ವಿಸ್ಮಯ ನ್ಯೂಸ್ ಕುಮಟಾ

Back to top button