Follow Us On

WhatsApp Group
Focus NewsImportant
Trending

ತೋಟದ ಬಾವಿಯಲ್ಲಿ ಆಯ ತಪ್ಪಿ ಬಿದ್ದು ಒಂದನೇ‌ ತರಗತಿ ವಿದ್ಯಾರ್ಥಿ ದುರ್ಮರಣ

ಹೊನ್ನಾವರ: ತಾಲೂಕಿನ ವಂದೂರು ಸಮೀಪ ತೋಟದ ಬಾವಿಯಲ್ಲಿ ಆಯ ತಪ್ಪಿ ಬಿದ್ದು ಮಗು ಮೃತಪಟ್ಟ ಧಾರುಣ ಘಟನೆ ವರದಿಯಾಗಿದೆ.
ತಾಲೂಕಿನ ಕಡ್ಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಂದೂರಿನ ನಾಗಭೂಷಣ ದಯಾನಂದ ಹೆಗಡೆ ಎನ್ನುವ ಒಂದನೆ ತರಗತಿ ವಿದ್ಯಾರ್ಥಿ ತಮ್ಮ ಮನೆಯ ತೋಟದ ಸಮೀಪ ನಾಯಿಯೊಂದಿಗೆ ಆಟ ಆಡುತ್ತಾ ತೆರಳಿ ಆಕಸ್ಮಿಕವಾಗಿ ತೆರೆದ ಬಾವಿಯಲ್ಲಿ ಬಿದ್ದಿದ್ದಾನೆ.

Banking Jobs: ಬ್ಯಾಂಕ್ ಆಫ್ ಇಂಡಿಯಾದಲ್ಲಿ 500 ಉದ್ಯೋಗಾವಕಾಶ: ಆರಂಭಿಕ ವೇತನ 36 ಸಾವಿರದಿಂದ 63 ಸಾವಿರ

ಮಗುವನ್ನು ಕುಟುಂಬದವರು ತೋಟದಲ್ಲಿ ಹುಡುಕಿ ಬಾವಿಯ ಕಡೆ ನೋಡಿದಾಗ ದುರಂತ ಬೆಳಕಿಗೆ ಬಂದಿದೆ. ತೆರೆದ ಬಾವಿಯಾಗಿದ್ದು, ಬಾವಿಯಲ್ಲಿ ನೀರು ಇದ್ದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳಕ್ಕಾಗಮಿಸಿದ ಹೊನ್ನಾವರ ಪಿಎಸೈ ಪ್ರವೀಣಕುಮಾರ ನೇತ್ರತ್ವದಲ್ಲಿ ಸಿಬ್ಬಂದಿಗಳು ಪರಿಶೀಲನೆ ನಡೆಸಿದ ಬಳಿಕ ಸಿಬ್ಬಂದಿ ಶಿವಾನಂದ ಚಿತ್ರಗಿ ಬಾವಿಗೆ ಇಳಿದು ಶವವನ್ನು ಮೆಲಕ್ಕೆ ಎತ್ತಿದ್ದಾರೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button