Important
Trending

ಸ್ವೀಕಾರಕೇಂದ್ರದಿoದ ಟೆರಿಸ್ ಮೇಲಿಂದ ಸೀರೆ ಕಟ್ಟಿ ಅದರ ಮೂಲಕ ಇಳಿದು ಪರಾರಿಯಾಗಿದ್ದ ಯುವತಿ ಪತ್ತೆ

ಕಾರವಾರ: ನಗರದ ಸ್ವೀಕಾರ ಕೇಂದ್ರದಿoದ ಓಡಿ ಹೋಗಿದ್ದ ಯುವತಿಯೋರ್ವಳನ್ನು ಕೊನೆಗೂ ಪತ್ತೆ ಮಾಡಿ ಸ್ವೀಕಾರ ಕೇಂದ್ರಕ್ಕೆ ಪುನಃ ದಾಖಲಿಸಿದ ಘಟನೆ ನಡೆದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಮಂದಿರ ಕಟ್ಟಡದಲ್ಲಿರುವ ಸ್ವೀಕಾರ ಕೇಂದ್ರದಿoದ ಶನಿವಾರ ಮಧ್ಯಾಹ್ನ 21 ವರ್ಷದ ಯುವತಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಸುತ್ತಮುತ್ತ ಹುಡುಕಾಟ ನಡೆಸಿದ ಸಿಬ್ಬಂದಿ ಮೇಲ್ವಿಚಾರಕಿಗೆ ತಿಳಿಸಿದ್ದು, ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಬಳಿಕ ಯುವತಿ ಬಸ್ ನಿಲ್ದಾಣದ ಕಡೆ ತೆರಳುತ್ತಿರುವುದನ್ನ ಗಮನಿಸಿದ ಮೆಲ್ವಿಚಾರಕಿ ಆಕೆಯನ್ನು ಹಿಡಿದು ಪೊಲೀಸರ ಸಹಕಾರದಲ್ಲಿ ಪುನಃ ಸ್ವೀಕಾರ ಕೇಂದ್ರಕ್ಕೆ ದಾಖಲಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ಈಕೆ ಸ್ವೀಕಾರ ಕೇಂದ್ರದ ಟೆರಿಸ್ ಮೇಲಿಂದ ಸೀರೆ ಕಟ್ಟಿ ಅದರ ಮೂಲಕ ಇಳಿದು ಪರಾರಿಯಾಗಿರುವುದು ಗೊತ್ತಾಗಿದೆ.

Back to top button