Follow Us On

WhatsApp Group
Important
Trending

ಖಾಸಗಿ ಸಂಸ್ಥೆಯಿoದ Kumta-Honnavar ರೂಟ್ ಗೆ ನಾಲ್ಕು ಮಿನಿ ಬಸ್ : ಟೆಂಪೋ ಚಾಲಕ, ಮಾಲಕ ಸಂಘದವರ ಪ್ರತಿಭಟನೆ

ಶಾಸಕರ ನೇತೃತ್ವದಲ್ಲಿ ಬಸ್ ತಡೆದು ಆಕ್ರೋಶ

ಕುಮಟಾ:  ಖಾಸಗಿ ಬಸ್ ಸಂಸ್ಥೆಯೊಂದು ಕುಮಟಾ-ಹೊನ್ನಾವರ ರೂಟ್‌ಗೆ ನಾಲ್ಕು ಮಿನಿ ಬಸ್‌ಗಳನ್ನು ಬಿಟ್ಟಿರುವುದನ್ನು ಖಂಡಿಸಿ ಕುಮಟಾದ ಟೆಂಪೋ ಚಾಲಕ, ಮಾಲಕ ಸಂಘದವರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಮಿನಿ ಬಸ್ ಅನ್ನು ಕುಮಟಾ ಗಿಬ್ ಸರ್ಕಲ್ ಬಳಿ ತಡೆದು ಪ್ರತಿಭಟನೆ ನಡೆಸಿದರು.

ಕುಮಟಾ-ಸಿದ್ದಾಪುರಕ್ಕೆ ಸೀಮಿತವಾಗಿದ್ದ ಗಜಾನನ ಬಸ್ ಸಂಸ್ಥೆಯವರು ಕುಮಟಾ-ಹೊನ್ನಾವರ ರೂಟ್‌ಗೂ ಪರ್ಮಿಟ್ ಪಡೆದು ನಾಲ್ಕು ಮಿನಿ ಬಸ್‌ಗಳನ್ನು ಬಿಟ್ಟಿದ್ದಾರೆ. ಇದರಿಂದ ಇದೇ ರೂಟ್‌ನಲ್ಲಿ ಟೆಂಪೋ ಓಡಿಸುತ್ತಿದ್ದ ಚಾಲಕರಿಗೆ ತೊಂದರೆಯಾಗಿದೆ. ಹಾಗಾಗಿ ತಮ್ಮ ಸಮಸ್ಯೆಯನ್ನು ಶಾಸಕ ದಿನಕರ ಶೆಟ್ಟಿ ಅವರ ಬಳಿ ಹೇಳಿಕೊಂಡು ಟೆಂಪೋ ಚಾಲಕರು ಶಾಸಕರ ನೇತೃತ್ವದಲ್ಲಿ ಪಟ್ಟಣದ ಗಿಬ್ ಸರ್ಕಲ್‌ನಲ್ಲಿ ಜಮಾಯಿಸಿ ಮಿನಿ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಇದೇ ವೇಳೆ ಸ್ಥಳಕ್ಕೆ ಆರ್‌ಟಿಒ ಅಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿದ ಶಾಸಕರು, ಈ ಮಿನಿ ಬಸ್‌ಗಳ ಪರ್ಮಿಟ್ ಬಗ್ಗೆ ಪರಿಶೀಲಿಸುವ ಜೊತೆಗೆ ಸ್ಥಳೀಯ ಟೆಂಪೋ ಚಾಲಕರಿಗೆ  ಅನ್ಯಾಯವಾಗದ ರೀತಿಯಲ್ಲಿ ಸಮಸ್ಯೆ ಪರಿಹರಿಸಲು ಸೂಚಿಸಿದರು. ಈ ವೇಳೆ ಮಾತನಾಡಿದ ಶಾಸಕರು,  ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಗೊಳಿಸಿದ್ದರಿಂದ ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುರಿಸುತ್ತಿದ್ದಾರೆ. ಇದೀಗ ಮತ್ತೆ ಸುಟ್ಟ ಗಾಯಕ್ಕೆ ಬ್ರೇಕ್ ಎಳೆಯುವಂತೆ ಕುಮಟಾ ಹೊನ್ನಾವರಕ್ಕೆ ಖಾಸಗಿ ಬಸ್ ಬಿಡಲಾಗಿದೆ. ಈ ಬಗ್ಗೆ ನಾನು ವಿಧಾನಸಭೆಯಲ್ಲಿ ಸಾರಿಗೆ ಸಚಿವರಿಗೆ ಮತ್ತು ಕಮೀಷ್ನರ್ ಜೊತೆಗೆ ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಸತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಟೆಂಪೋ ಚಾಲಕರಾದ ಜನಾರ್ಧನ ನಾಯ್ಕ ಮಾತನಾಡಿ, ಕುಮಟಾ ಹೊನ್ನಾವರ ರೂಟ್ ಗೆ ಖಾಸಗಿ ಬಸ್ ಸಂಚರಿಸುವದರಿಂದ ಟ್ಯಾಂಪೋ ಚಾಲಕ ಮಾಲಕರಿಗೆ ಉಂಟಾಗುವ ಸಮಸ್ಯೆಗಳ ಕುರಿತು ವಿವರಿಸಿ, ತಮ್ಮ ಅಳಲು ತೋಡಿಕೊಂಡರು. ಈ ಪ್ರತಿಭಟನೆಯಲ್ಲಿ ಟೆಂಪೋ ಚಾಲಕರ ಸಂಘದ ಪದಾಧಿಕಾರಿಗಳು, ಸದಸ್ಯರು ಮುಂತಾದವರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ, ಕುಮಟಾ.

Back to top button