Important
Trending

ಪ್ರೀತಿಯ ನಾಟಕವಾಡಿ ಯುವತಿ ಜೊತೆ ಸಂಪರ್ಕ: ಹೆಸ್ಕಾಂನ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲ ಅಭಿಯಂತರ ಹುದ್ದೆಯಲ್ಲಿದ್ದವನಿಗೆ ಏಳು ವರ್ಷಗಳ ಶಿಕ್ಷೆ

ಕುಮಟಾ: ಈ ಹಿಂದೆ ಕುಮಟಾ ಹೆಸ್ಕಾಂನ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲ ಅಭಿಯಂತರ ಆಗಿದ್ದ ಕುಂದಾಪುರದ ರಾಕೇಶ್ ಎನ್ನುವವರಿಗೆ ಉಚ್ಚ ನ್ಯಾಯಾಲಯ ಏಳು ವರ್ಷಗಳ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಕುಮಟಾ ಹೆಸ್ಕಾಂ ಕಚೇರಿಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಕೇಶ ಬಿ.ಎಡ್. ಓದುತ್ತಿದ್ದ ವಿದ್ಯಾರ್ಥಿಯೋರ್ವಳಿಗೆ ಪ್ರೀತಿಸಿದ ನಾಟಕವಾಡಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದ ಎಂಬ ಆರೋಪ ಎದುರಿಸುತ್ತಿದ್ದರು.

ಇದೀಗ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಕೇಶ ಬಿ. ಎನ್ನುವವರಿಗೆ ಏಳು ವರ್ಷಗಳ ಶಿಕ್ಷೆಯ ಆದೇಶವನ್ನು ಉಚ್ಚ ನ್ಯಾಯಾಲಯ ಹೊರಡಿಸಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button