Focus News
Trending

ಹೊನ್ನಾವರ, ಕುಮಟಾದ ಇಂದಿನ ಕರೊನಾ ವಿವರ

ಹೊನ್ನಾವರದಲ್ಲಿ 10 ಪಾಸಿಟಿವ್
ಕುಮಟಾದಲ್ಲಿ ಏಳು ಕೇಸ್ ದೃಢ

ಹೊನ್ನಾವರ: ತಾಲೂಕಿನಲ್ಲಿ ಇಂದು 10 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಪಟ್ಟಣ ವ್ಯಾಪ್ತಿಯಲ್ಲಿ 3, ಗ್ರಾಮೀಣ ಭಾಗದಲ್ಲಿ 7 ಕೇಸ್ ಕಂಡುಬ0ದಿದೆ. ಹೊನ್ನಾವರ ಪಟ್ಟಣದ ಪ್ರಭಾತನಗರದ 67 ವರ್ಷದ ಪುರುಷ, ರಾಮತೀರ್ಥ ಕ್ರಾಸಿನ 53 ವರ್ಷದ ಪುರುಷ, 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.


ಗ್ರಾಮಿಣ ಭಾಗವಾದ ಹಳದೀಪುರದ 40 ವರ್ಷದ ಮಹಿಳೆ, 29 ವರ್ಷದ ಯುವಕ, ಮುಗ್ವಾ ಸುರಕಟ್ಟೆಯ 70 ವರ್ಷದ ಮಹಿಳೆ, 15 ವರ್ಷದ ಬಾಲಕ, ಮೋಳ್ಕೋಡಿನ 40 ವರ್ಷದ ಪುರುಷ, ಜನಕ್ಕಡಕಲನ 30 ವರ್ಷದ ಯುವಕ, ಮಂಕಿ ಎಳ್ಳಿಮಕ್ಕಿಯ 21 ವರ್ಷದ ಯುವಕ ಸೇರಿ ಇಂದು 10 ಜನರಲ್ಲಿ ಪಾಸಿಟಿವ್ ಬಂದಿದೆ.

ಕುಮಟಾದಲ್ಲಿ ಏಳು ಪಾಸಿಟಿವ್:

ಕುಮಟಾ: ತಾಲೂಕಿನಲ್ಲಿ ಇಂದು 7 ಪ್ರಕರಣ ದಾಖಲಾಗಿದೆ. ತಾಲೂಕಿನ ಮೂಲೇಕೇರಿ 2, ಬಗ್ಗೋಣ 3, ಮೊರಬಾ ಹಾಗೂ ಹಿರೇಗುತ್ತಿಯಲ್ಲಿ ಒಂದೊoದು ಪ್ರಕರಣ ಪತ್ತೆಯಾಗಿದೆ.

ಮೂಲೇಕೇರಿಯ 35 ವರ್ಷದ ಪುರುಷ, 46 ವರ್ಷದ ಪುರುಷ, ಬಗ್ಗೋಣದ 31 ವರ್ಷದ ಮಹಿಳೆ, 70 ವರ್ಷದ ವೃದ್ದ, 65 ವರ್ಷದ ವೃದ್ದೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಿರೇಗುತ್ತಿನ 46 ವರ್ಷದ ಮಹಿಳೆ, ಮೊರಬಾದ 39 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ಏಳು ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 1690ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ

Back to top button