ಮಾಹಿತಿ
Trending

ಉತ್ತರಕನ್ನಡದಲ್ಲಿ ಇಂದು 58 ಪಾಸಿಟಿವ್

52 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12596 ಏರಿಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 58 ಕರೋನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತರ ಕಾರವಾರ 3 ಅಂಕೋಲಾ 3, ಕುಮಟಾ 24 ಹೊನ್ನಾವರ 1 ಭಟ್ಕಳ 4, ಮುಂಡಗೋಡ 12, ಹಳಿಯಾಳ 10 ಕೇಸ್ ದೃಢಪಟ್ಟಿದೆ.

ಇದೇ ವೇಳೆ ಇಂದು 52 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾರವಾರ 2, ಕುಮಟಾ 27, ಹೊನ್ನಾವರ 17, ಭಟ್ಕಳ 2, ಸಿದ್ದಾಪುರ ನಾಲ್ವರು ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಇಂದು ಯಾವುದೇ ಸಾವಿನ ಪ್ರಕರಣ ಪತ್ತೆಯಾಗಿಲ್ಲ. ಇಂದು 58 ಪ್ರಕರಣ ದಾಖಲಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12596 ಏರಿಕೆಯಾಗಿದೆ. 337 ಜನರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ 11398 ಸಾವಿರ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button