Big News
Trending

ಪುನೀತಾ ರಾಜ್ ಕುಮಾರ್ ಕಣ್ಣಲ್ಲಿ ನೀರು

ಭೇಟಿ ಸಾಧ್ಯವಾಗದೇ ಮನೆಗೆ ಮರಳಿದ್ದ ಅಜ್ಜಿಗೆ ಕಾದಿತ್ತು ಆಶ್ಚರ್ಯ!
ರಾಜ್ ಅಭಿಮಾನಿಯಾಗಿದ್ದ ಅಜ್ಜಿಯಿಂದ ಪವರ್ ಸ್ಟಾರ್‌ಗೆ ಪಂಚ್

ಜೋಯಿಡಾ: ಉತ್ತರಕನ್ನಡ ಜಿಲ್ಲೆಯ ಜೊಯಿಡಾ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಚಲನಚಿತ್ರ ನಟ ಪುನಿತ್ ರಾಜಕುಮಾರ ಇವರು ರಾಜಕುಮಾರ ಅಭಿಮಾನಿ ಅಜ್ಜಿಯೋಬ್ಬರ ಬೇಟಿ ಮಾಡಿದ ಸಂದರ್ಭ ಕಣ್ಣಿರು ಹಾಕಿದ ದೃಶ್ಯ ಕಂಡುಬoತು.

ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಡಿಗ್ಗಿ ಭಾಗದಲ್ಲಿ ಶೈಕ್ಷಣಿಕ ಸಾಕ್ಷ ಚಿತ್ರ ಚಿತ್ರೀಕರಣಕ್ಕೆ ಬಂದ ಪುನಿತ್ ರಾಜಕುಮಾರ ಇವರು ಜೊಯಿಡಾ ಪ್ರವಾಸಿ ಮಂದಿರದಲ್ಲಿ ಇರುವ ಸಂದರ್ಬ ಜೊಯಿಡಾ ಗಾವಡೆವಾಡಾದ 70 ವರ್ಷದ ರಾಜಕುಮಾರ್ ಅಭಿಮಾನಿಯಾಗಿದ್ದ ಕರಿಯವ್ವಾ ನಾಯ್ಕ ಎನ್ನುವ ಅಜ್ಜಿಯೋಬ್ಬರು ಪ್ರವಾಸಿ ಮಂದಿರದ ಹತ್ತಿರ ಬಂದಿದ್ದರು. ಆದರೆ, ಅಲ್ಲಿ ಭದ್ರತೆ ಕಾರ್ಯದಲ್ಲಿ ಇದ್ದ ಪೋಲಿಸ್ ಸಿಬ್ಬಂದಿಗಳು ಅಜ್ಜಿಯನ್ನು ತಡೆದಿದ್ದಾರೆ. ಇವರ ಜೊತೆ ಹಟ ಹಿಡಿದ ಈ ಅಜ್ಜಿ ರಾಜಕುಮಾರ ಅಭಿಮಾನಿ ನಾನು. ಪುನಿತ್ ರಾಜಕುಮಾರ ಅವರನ್ನು ಭೇಟಿಯಾಗಿ ಮಾತಾಡಿಸಲೇ ಬೇಕು ಎಂದು ಜಿದ್ದಿಗೆ ಬಿದ್ದು, ತನ್ನ ಮೊಬೈಲ್ ನಂಬರ ಅನ್ನು ಪೋಲಿಸರಿಗೆ ಕೊಟ್ಟು ಬಂದಿದ್ದಾಳoತೆ.


ಇಲ್ಲಿನ ವಿಷಯವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ತಿಳಿಸಿದ ಸಂದರ್ಭ, ಅವರೇ ಅಜ್ಜಿಯನ್ನು ಕರೆಸುವಂತೆ ತಿಳಿಸಿದ್ದಾರಂತೆ. ಅಜ್ಜಿ ಮನೆಗೆ ಬಂದು ತಲುಪುವ ವೇಳೆ ಇದೆ ಪೋಲಿಸ್ ಕಡೆಯಿಂದ ಯಾರಿಗೂ ಹೇಳಬೇಡಿ. ಬಂದು ಪುನೀತ್ ಅವರನ್ನು ಭೇಟಿಯಾಗಿ ಎಂದು ಕರೆ ಬಂದಿದೆ. ರಾತ್ರಿ 9 ರ ಸುಮಾರಿಗೆ ಅಜ್ಜಿ ಪುನೀತ್ ಅವರಲ್ಲಿ ಭೇಟಿಯಾಗಿ ನಾನು ಮತ್ತೆ ನನ್ನ ಗಂಡ ರಾಜಕುಮಾರ ಅಭಿಮಾನಿಗಳು. 12 ವರ್ಷದ ಹಿಂದೆ ನನ್ನ ಗಂಡ ಬಾಳೆಗೌಡ ರಾತ್ರಿ ಕವಿರತ್ನ ಕಾಳಿದಾಸ ಪಿಲ್ಮ್ ನೋಡಿ ಬೆಳಿಗ್ಗೆ 6 ಘಂಟೆಗೆ ತೀರಿಕೊಂಡಿದ್ದಾರೆ ಎಂದು ಅಜ್ಜಿ ಪುನಿತ್ ಅವರಲ್ಲಿ ಹೇಳಿದಾಗ ಅವರ ಕಣ್ಣಲ್ಲಿ ನೀರು ಬಂತು ಎಂದು ಅಜ್ಜಿ ಹೇಳಿದ್ದಾರೆ.

ಈ ಕುರಿತ ವಿಡಿಯೋ ಇಲ್ಲಿದೆ ನೋಡಿ

ಜೊಯಿಡಾ ಐಬಿ ಹೊರಗೆ ನೂರಾರು ಜನ ಪುನಿತ್ ರಾಜಕುಮಾರ ಬೇಟಿಗೆ ನಿಂತಿದ್ದರೂ, ಅವರು ನನ್ನನ್ನು ಅವರಾಗಿಯೇ ಕರೆಸಿಕೊಂಡು ಮಾತಾಡಿದ್ದಾರೆ. ರಾಜಕುಮಾರ ಅಭಿಮಾನಿಯಾದ ನಾನು ಜೊಯಿಡಾದಲ್ಲಿ ಪುನಿತ್ ರಾಜಕುಮಾರ ಬೇಟಿಯಾಗಿದ್ದು ಖುಷಿಯಾಗಿದೆ ಎಂದು ಅಜ್ಜಿ ಪ್ರತಿಕ್ರಿಯಿಸಿದ್ದಾರೆ.


ವಿಸ್ಮಯ ನ್ಯೂಸ್, ಜೋಯಿಡಾ

Back to top button