Follow Us On

Google News
Info
Trending

ಅಂಕೋಲಾದಲ್ಲಿಂದು 3 ಕೊವಿಡ್ ಕೇಸ್ : 800 ಗಡಿದಾಟಿದ ಒಟ್ಟೂ ಸೋಂಕಿತರು

ಅಂಕೋಲಾ : ಭಾನುವಾರ 3 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದ್ದು, ಈ ಮೂಲಕ ತಾಲೂಕಿನಲ್ಲಿ ಆರಂಭದಿಂದ ಇಲ್ಲಿಯವರೆಗೆ ಒಟ್ಟೂ ಸೋಂಕಿತರ ಸಂಖ್ಯೆ 800 ರ ಗಡಿದಾಟಿದಂತಾಗಿದೆ. ಹೊಸಗದ್ದೆ ಯ 45ರ ಪುರಷ, ವಂದಿಗೆ ಗ್ರಾ.ಪಂ.ವ್ಯಾಪ್ತಿಯ 33ರ ಮಹಿಳೆ ಮತ್ತು 53ರ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟಿದೆ.

ಗುಣಮುಖರಾದ 4 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇ ಶನ್‍ಲ್ಲಿರುವ 47 ಮಂದಿ ಸಹಿತ ಒಟ್ಟೂ 58 ಸಕ್ರಿಯ ಪ್ರಕರಣಗಳಿವೆ. 9 ಜನರ ಗಂಟಲು ದ್ರವವನ್ನು ಆರ್‍ಟಿಪಿಸಿಆರ್ ಟೆಸ್ಟ್‍ಗೆ ಒಳಪಡಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button