Follow Us On

WhatsApp Group
Important
Trending

ಮಾಜಿ ಸಂಸದರ ಪತ್ನಿಯ ಕುತ್ತಿಗೆಯಿಂದ ಬಂಗಾರದ ಸರ ಅಪಹರಿಸಿದ್ದ ಕಳ್ಳನ ಬಂಧನ

ಶೀಘ್ರ ಕಾರ್ಯಾಚಣೆ ನಡೆಸಿದ ಪೊಲೀಸರು

ಶಿರಸಿ: ನೀರು ಕೇಳುವ ನೆಪ ಮಾಡಿಕೊಂಡು ಮಾಜಿ ಸಂಸದ ದೇವರಾಜ ನಾಯ್ಕ ಮನೆಗೆ ನುಗ್ಗಿ, ಅವರ ಪತ್ನಿಯ ಕುತ್ತಿಗೆಯಿಂದ ಬಂಗಾರದ ಸರ ಅಪಹರಿಸಿದ್ದ ಕಳ್ಳನನ್ನು ಶೀಘ್ರ ಕಾರ್ಯಾಚಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ. ಹಾನಗಲ್ ತಾಲೂಕಿನ ಪರಶುರಾಮ ಬಸಪ್ಪ ಸಣ್ಣಮನಿ ಬಂಧಿತ ಆರೋಪಿ ಎಂದು ತಿಳಿದುಬಮದಿದೆ. ಬಂಗಾರದ ಸರವನ್ನು ವಶಕ್ಕೆ ಪಡೆಯಲಾಗಿದೆ.

ವಿಸ್ಮಯ ಟಿ.ವಿಯ ವಾಟ್ಸಪ್ ಗ್ರೂಪ್ ಸೇರಲುಇಲ್ಲಿ ಕ್ಲಿಕ್ ಮಾಡಿ

ಹೌದು, ಎರಡು ದಿನಗಳ ಹಿಂದೆ ನೀರು ಕೇಳುವ ನೆಪ ಮಾಡಿಕೊಂದು ಬಂದ ವ್ಯಕ್ತಿಯೊಬ್ಬ ಮಾಜಿ ಸಂಸದರ ಮನೆಗೆ ನುಗ್ಗಿ, ಅವರ ಪತ್ನಿಯ ಬಂಗಾರದ ಸರವನ್ನು ಹರಿದುಕೊಂಡು ಹೋಗಿದ್ದ. ಮಾಜಿ ಸಂಸದರ ಪತ್ನಿ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಹೊಂಚು ಹಾಕಿ ದುಷ್ಕರ್ಮಿ ಈ ಕೃತ್ಯ ಎಸಗಿದ್ದ. ಸುಮಾರು 3 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ತೂಕದ ಸರವನ್ನು ಕಿತ್ತುಕೊಂಡು ಕಳ್ಳ ಮನೆಯಿಂದ ಪರಾರಿಯಾಗಿದ್ದ. ಮಧ್ಯಾಹ್ನ 12 ಗಂಟೆಯ ವೇಳೆಗೆ ಘಟನೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಪ್ರಕರಣವನ್ನು ಪೊಲೀಸರು ಸವಾಲಾಗಿ ಸ್ವೀಕರಿಸಿದ್ದರು.

DYSP ಗಣೇಶ ಕೆ.ಎಲ್. ಸಮರ್ಥ ಮಾರ್ಗದರ್ಶನ ಮತ್ತು CPI ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕಾರ್ಯಚರಣೆಯಲ್ಲಿ ಪಿಎಸ್ಆಯ್ ಗಳಾದ ರತ್ನಾ ಕುರಿ, ಮಾಲಿನಿ ಮಸಬಾವಿ, ರಾಜಕುಮಾರ ಉಕ್ಕಲಿ,ಮಾಂತೇಶ ಕುಂಬಾರ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button