Important
Trending

ಹಾಡುಹಗಲೆ ಮನೆಗೆ ನುಗ್ಗಿ ಮಾಜಿ ಸಂಸದರ ಪತ್ನಿಯ ಕುತ್ತಿಗೆಯಿಂದ ಸರ ಕದ್ದ ಕಳ್ಳ: ನೀರುಕೇಳುವ ನೆಪ ಮಾಡಿಕೊಂಡು ದುಷ್ಕೃತ್ಯ

ಸಾರ್ವಜನಿಕರಲ್ಲಿ ಆತಂಕ

ಶಿರಸಿ: ನೀರು ಕೇಳುವ ನೆಪ ಮಾಡಿಕೊಂದು ಬಂದ ವ್ಯಕ್ತಿಯೊಬ್ಬ ಮಾಜಿ ಸಂಸದರ ಮನೆಗೆ ನುಗ್ಗಿ, ಅವರ ಪತ್ನಿಯ ಬಂಗಾರದ ಸರವನ್ನು ಹರಿದುಕೊಂಡು ಹೋದ ಘಟನೆ ನಗರದ ಯಲ್ಲಾಪುರ ನಾಕಾದಲ್ಲಿ ನಡೆದಿದೆ. ಹೌದು, ಮಾಜಿ ಸಂಸದರ ಪತ್ನಿ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಹೊಂಚು ಹಾಕಿ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ.

ಸುಮಾರು 3 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ತೂಕದ ಸರವನ್ನು ಕಿತ್ತುಕೊಂಡು ಕಳ್ಳ ಮನೆಯಿಂದ ಪರಾರಿಯಾಗಿದ್ದಾನೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಘಟನೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಮಾರುಕಟ್ಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾoಗ್ರೆಸ್‌ನಿoದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ದೇವರಾಯ ನಾಯ್ಕ ಅವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ. ದೇವರಾಯ ನಾಯ್ಕ ಅವರ ಪತ್ನಿ ಗೀತಾ ನಾಯ್ಕ ಒಬ್ಬರೇ ಇದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪ ಮಾಡಿಕೊಂಡು, ಅವರ ಕುತ್ತಿಗೆಯಲ್ಲಿ ಸರವನ್ನು ಹರಿದುಕೊಂಡು ಪರಾರಿಯಾಗಿದ್ದಾನೆ.

ವಿಸ್ಮಯ ನ್ಯೂಸ್, ಶಿರಸಿ

Back to top button