Important
Trending

ಹೋಮ್‌ಸ್ಟೇನಲ್ಲಿರುವಾಗ ಪ್ರವಾಸಿಗನಿಗೆ ಹೃದಯಾಘಾತ: ವಾಕಿಂಗ್ ಮಾಡುತ್ತಿದ್ದ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್

ದಾಂಡೇಲಿ: ಪ್ರವಾಸಕ್ಕೆಂದು ದಾಂಡೇಲಿಗೆ ಬಂದಿದ್ದ ಪ್ರವಾಸಿಗ ಹೃದಯಾಘಾತದಿಮದ ಮೃತಪಟ್ಟ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ನಿವಾಸಿ ಪವನ್‌ಕುಮಾರ್ ಮೃತಪಟ್ಟ್ ದುರ್ದೈವಿ. ಈತ ಏಳೆಂಟಯ ಜನರ ತಂಡದ ಜೊತೆ ಪ್ರವಾಸಕ್ಕೆಂದು ದಾಂಡೇಲಿಗೆ ಆಗಮಿಸಿದ್ದ. ಇಲ್ಲಿನ ಹೋಂ ಸ್ಟೇವೊಂದರಲ್ಲಿ ಇವರೆಲ್ಲರೂ ತಂಗಿದ್ದರು.

ಈ ವೇಳೆ ಪವನ್ ಅವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆತನನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ಆದರೆ ಅದಾಗಲೇ ಆತ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾಕಿಂಗ್ ಮಾಡುತ್ತಿದ್ದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್

ಶಿರಸಿ: ಶಿಕ್ಷಕರಾಗಿ ನಿವೃತ್ತ ಜೀವನ ಸಾಗಿಸುತ್ತಿದ್ದ, ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದ ಸಲಿಲಾ ಭಟ್ಟ ಲೋಕೇಶ್ವರ ಶಿರಸಿಯ ಚಿಪಗಿಯಲ್ಲಿರುವ ವಾತ್ಸಲ್ಯ ವಸತಿ ಸಂಕೀರ್ಣದಲ್ಲಿ ಬೆಳಿಗಿನ ವಾಕಿಂಗ್ ಮಾಡುತ್ತಿರುವಾಗ ಹೃದಯಾಘಾತಕ್ಕೊಳಗಾಗಿ ಮೃತ ಪಟ್ಟಿದ್ದಾರೆ. ತನ್ನ ಪತಿ ರಾಷ್ಟçಪ್ರಶಸ್ತಿ ವಿಜೇತ ಶಿಕ್ಷಕರಾದ ಎಸ್.ಎಸ್.ಭಟ್ಟ ಲೋಕೇಶ್ವರ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರರನ್ನು ಅಗಲಿದ್ದು, ಕುಮಟಾ ರೋಟರಿ ಪರಿವಾರದ ಸದಸ್ಯರಾಗಿದ್ದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button