ಕಾರವಾರ: ಉತ್ತರಕನ್ನಡಲ್ಲಿ ಇಂದು 48 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ, ಕುಮಟಾದಲ್ಲಿ ಒಂದು ಸಾವು ಸಂಭವಿಸಿದೆ.
ಹೊನ್ನಾವರ 8, ಭಟ್ಕಳದಲ್ಲಿ 4,ಕಾರವಾರದಲ್ಲಿ 4, ಅಂಕೋಲಾದಲ್ಲಿ 7, ಕುಮಟಾದಲ್ಲಿ 11, ಶಿರಸಿಯಲ್ಲಿ 8, ಯಲ್ಲಾಪುರದಲ್ಲಿ 2, ಹಳಿಯಾಳದಲ್ಲಿ 1, ಮತ್ತು ಜೋಯಿಡಾದಲ್ಲಿ 3 ಕೇಸ್ ಕಾಣಿಸಿಕೊಂಡಿದೆ
ಇನ್ನೊಂದೆಡೆ , ಇಂದು 41 ಮಂದಿ ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಭಟ್ಕಳ 5, ಶಿರಸಿ 10, ಸಿದ್ದಾಪುರ 3,ಕಾರವಾರ 10, ಅಂಕೋಲಾ 0, ಕುಮಟಾ 4, ಹಾಗು ಹಳಿಯಾಳದಲ್ಲಿ ಇಬ್ಬರು ಗುಣಮುಖರಾಗಿದ್ದಾರೆ.
ಅಂಕೋಲಾದಲ್ಲಿ 7 ಹೊಸ ಕೊವಿಡ್ ಕೇಸ್:
ಅಂಕೋಲಾ ಜುಲೈ 18: ತಾಲೂಕಿನಲ್ಲಿ ರವಿವಾರ 7 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 63 ಕ್ಕೆ ಏರಿಕೆಯಾಗಿದೆ..
ತಾಲೂಕಿನ ಒಟ್ಟೂ 6 ಸೊಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಲಕ್ಷಣಗಳುಳ್ಳ ಇತರೆ 57 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ. ಈ ವರೆಗೆ ತಾಲೂಕಿನಲ್ಲಿ 63 ಕೊವಿಡ್ ಸಾವಿನ ಪ್ರಕರಣ ದಾಖಲಾಗಿದೆ.
ಇಂದು ತಾಲೂಕಿನ ಪಟ್ಟಣ ವ್ಯಾಪ್ತಿಯ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ (181), ಗ್ರಾಮೀಣ ವ್ಯಾಪ್ತಿಯ ಕೋಡ್ಸಣಿ (55), ಆಂದ್ಲೆ – (152),ಬೊಬ್ರುವಾಡಾ(118) ರಾಮನ ಗುಳಿ (65) ಸೇರಿ ಒಟ್ಟೂ 571 ಡೋಸ್ ಲಸಿಕೆಗಳನ್ನು ನೀಡಲಾಗಿದೆ.
ವ್ಯಾಕ್ಸಿನ್ ಪೂರೈಕೆ ವ್ಯತ್ಯಯದಿಂದ ಜುಲೈ 19ರ ಸೋಮವಾರ ತಾಲೂಕಿನಲ್ಲಿ ಎಲ್ಲಿಯೂ ವ್ಯಾಕ್ಸಿನೇಷನ್ ನಡೆಸಲಾಗುತ್ತಿಲ್ಲ.ಸಾರ್ವಜನಿಕರು ಸಹಕರಿಸುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ