Important
Trending

ಉಕ್ಕಿಹರಿಯುತ್ತಿರುವ ಅಘನಾಶಿನಿ, ಗಂಗಾವಳಿ ನದಿ: ಹಲವು ಪ್ರದೇಶ ಜಲಾವೃತ: ಕೊಚ್ಚಿ ಹೋದ ಹಟ್ಟಿಕೇರಿ ತಾತ್ಕಾಲಿಕ ಸೇತುವೆ

ದಿವಗಿ, ಮಿರ್ಜಾನ್, ಹೆಗಡೆ, ಕೋಡ್ಕಣಿಯ ಹಲವೆಡೆ ಜಲಾವೃತ: ಹೊನ್ನಾವರದಲ್ಲೂ ಮಳೆ ಅವಾಂತರ: ಶಿರಸಿ ಪಟ್ಟಣದಲ್ಲಿ ಮನೆಗಳಿಗೆ ನುಗ್ಗಿದ ನೀರು: ಅಂಕೋಲಾದಲ್ಲಿ ಕೊಚ್ಚಿಹೋದ ಹಟ್ಟಿಕೇರಿ ಸೇತುವೆ: ಕಾರವಾರ ಮಲ್ಲಾಪುರದಲ್ಲಿ ಮುಳುಗಡೆ ಭೀತಿ

ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಹತ್ತಾರು ಮನೆಗಳು ಧರೆಗುರುಳಿವೆ. ರಕ್ಕಸದ ಅಲೆಗಳಿಗೆ ಕಡಲತೀರಗಳು ಕೊಚ್ಚಿ ಹೋಗಿ ಬಲೆ, ಬೋಟ್ ಗಳಿಗೆ ಸಾಕಷ್ಟು ಹಾನಿಯಾಗಿದೆ. ಈ ನಡುವೆ ಇನ್ನೇನು ಮಳೆ ಹೋಯಿತು ಎನ್ನುತ್ತಿರುವಾಗಲೇ ಇದೀಗ ಮತ್ತೆ ವರುಣನ ಅಬ್ಬರ ಜೋರಾಗಿದೆ. ನಿರಂತರ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿ ಸಾವಿರಾರು ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ನದಿತೀರದ ಪ್ರದೇಶಗಳು ಜಲಾವೃತಗೊಂಡು ಮತ್ತೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ.

ಕುಮಟಾ ತಾಲೂಕಿನ ಅಘನಾಶಿನಿ ನದ್ದಿ, ಉಕ್ಕಿ ಹರಿಯುತ್ತಿದ್ದು, ತಗ್ಗುಪ್ರದೇಶಗಳಿಗೆ ನುಗ್ಗಿದ ನೀರು ನಿಗ್ಗಿದೆ. ದಿವಗಿ, ಮಿರ್ಜಾನ್, ಹೆಗಡೆ, ಕೋಡ್ಕಣಿಯಲ್ಲಿ ಅವಾಂತರಗಳು ಸೃಷ್ಟಿಯಾಗಿದೆ, ದಿವಗಿಯ ಕೆಳಗಿನಕೇರಿಯಲ್ಲಿ ಮನೆಗೆ ಗಳಿಗೆ ನೀರು ನುಗ್ಗಿದೆ. ಕೃಷಿ ಭೂಮಿ, ಬತ್ತದ ಗದ್ದೆ ಸೇರಿದಂತೆ ಮನೆಗಳಿಗೂ ನೀರು ನುಗ್ಗಿದೆ. ಈ ಭಾಗದ ನದಿ ತೀರದ ಜನರು ಮಳೆ ತಗ್ಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.(ವಿಸ್ಮಯ ನ್ಯೂಸ್)

ದಿವಗಿ ವ್ಯಾಪ್ತಿಯಲ್ಲಿ ಅಘನಾಶಿನಿ ನದಿ ಪ್ರವಾಹ

ಕದ್ರಾ ಮತ್ತು ಕೊಡಸಳ್ಳಿ ಜಲಾಶಯದಿಂದ ನೀರುಬಿಟ್ಟ ಹಿನ್ನಲೆ ಕಾರವಾರ ಮಲ್ಲಾಪುರ, ಕೈಗಾ ಟೌನ್ಷಿಪ್ ಮುಳುಗಡೆ ಭೀತಿ ಎದುರಿಸುತ್ತಿದೆ. ಅಂಕೋಲಾ ತಾಲೂಕಿನ ಗಂಗಾವಳಿ ಯಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, 10ಕ್ಕೂ ಹೆಚ್ಚು ಗ್ರಾಮಗಳು ನೀರಿನಿಂದ ಆವೃತವಾಗಿದೆ. ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಹೊನ್ನಾವರ ಮಳೆ ಆರ್ಭಟ ಮುಂದುವರಿದಿದ್ದು, ಕಳೆದ ಒಂದು ವಾರದಿಂದ ಸುರಿಯಿತ್ತಿರುವ ಗಾಳಿ ಮಳೆಗೆ, ಹಳದೀಪುರ ಹಲವೆಡೆ ಮನೆಗೆ ಹಾನಿ ಸಂಭವಿಸಿದೆ. ಮನೆಯ ಗೋಡೆ ಕುಸಿದಿದೆ. ಹಲವೆಡೆ ಮರಬಿದ್ದು ಹಾನಿಯಾಗಿದೆ. ಶಿರಸಿಯಲ್ಲಿ ಕುಂಭದ್ರೋಣ ಮಳೆಯಿಂದಾಗಿ ಪಟ್ಟಣದ ಹಲವು ಮನೆಗಳಿಗೆ ನೀರು ನುಗ್ಗಿದೆ. ಆದರ್ಶನಗರ, ವಿವೇಕನಗರದಹಲವೆಗೆ ನೀರು ನಿಂತು, ಮನೆಗಳಿಗೆ ನುಗ್ಗಿದೆ. ಉತ್ತರಕನ್ನಡದ ಅತಿದೊಡ್ಡ ಕರೆಯಾದ ಗುಡ್ನಾಪುರ ಕರೆ ಸಂಪೂರ್ಣ ಭರ್ತಿಯಾಗಿದೆ.

ಹೆದ್ದಾರಿಯಲ್ಲಿ ಅಂಕೋಲಾ ತಾಲೂಕಿನ ಸುಂಕಸಾಳ ಬಳಿ ಗಂಗಾವಳಿ ನದಿ ನೀರಿನ ಹರಿವಿನ ಪ್ರಮಾಣಏರಿಕೆಯಾಗಿದ್ದು, ಹೆದ್ದಾರಿಯಲ್ಲಿ ನೀರು ನುಗ್ಗಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ..ಯಲ್ಲಾಪುರ ಅಂಕೋಲ ವ್ಯಾಪ್ತಿಯ ಪೊಲೀಸ್,ಕಂದಾಯ,ಅರಣ್ಯ,ಹೆಸ್ಕಾಂ ಮತ್ತಿತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಗಳು ಸ್ಥಳದಲ್ಲಿ ಹಾಜರಿದ್ದು ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ.

ಸುಂಕಸಾಳ: ಐರ್ಲೆಂಡ್ ಹೊಟೇಲ್ ಸಮೀಪ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button