ಭೀಕರ ಪ್ರವಾಹದ ಬಳಿಕ ಅವಾಂತರ ಗೋಚರ: ಇದುವರೆಗೂ ಏಳು ಮಂದಿ ಸಾವು: ಮೂವರ ಕಣ್ಮರೆ

ಕಾರವಾರ: ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ಉತ್ತರಕನ್ನಡ ಜಿಲ್ಲೆ ತತ್ತರಿಸಿ ಹೋಗಿದ್ದು, ಇದೀಗ ಮಳೆ ನಿಂತ ಮೇಲೆ ಅದರ ಪ್ರವಾಹ ತಂದಿಟ್ಟ ಆಘಾತಗಳು, ಅವಾಂತರಗಳು ಗೋಚರಿಸುತ್ತಿವೆ. ಉತ್ತರಕನ್ನಡದ ಹಲವೆಡೆ ಭೂಕುಸಿತಗಳು ಸಂಭವಿಸಿದೆ. ಯಲ್ಲಾಪುರದ ಅರಬೈಲ್ ಘಾಟ್, ಜೊಯಿಡಾ ತಾಲೂಕಿನ ಅಣಶಿ ಘಾಟ್,ಶಿರಸಿಯ ಜಾಲಿಗುಡ್ಡ, ಭೈರುಂಬೆ, ಕಳವೆ ಗುಡ್ಡ ಸೇರಿದಂತೆ ಹಲವಾರು ಕಡೆಗಳಲ್ಲಿ ಗುಡ್ಡ ಕುಸಿತವಾಗಿ, ಅವಾಂತರ ಸೃಷ್ಟಿಯಾಗಿದೆ. ಈಗಾಗಲೇ ಅರಬೈಲ್ ಘಾಟಿನ ರಸ್ತೆ ಕುಸಿದಿದ್ದು, ಇಲ್ಲಿ ಇನ್ನೂ ಸಂಚಾರ ಆರಂಭವಾಗಿಲ್ಲ.

https://vismaya24x7.com/wp-content/uploads/2021/07/hegde-divag.mp4
ನೆರೆಹಾವಳಿಯ ಕೆಲ ದೃಶ್ಯಗಳು

ಉತ್ತರಕನ್ನಡದ 108 ಗ್ರಾಮಗಳಲ್ಲಿ ಮಳೆ ಅಪಾರ ಪ್ರಮಾಣದ ಹಾನಿಯನ್ನು ಉಂಟು ಮಾಡಿದೆ. ಎರಡು ದಿನಗಳ ಕಾಲ ಅಬ್ಬರಿಸಿದ ಮಳೆಗೆ ಜಿಲ್ಲೆಯಲ್ಲಿ ಒಟ್ಟೂ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇವರಲ್ಲಿ 3 ಜನರು ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆಯುತ್ತಲೇ ಇದೆ. 108 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, 15,287 ಮಂದಿ ಸಂತ್ರಸ್ತರಾಗಿದ್ದಾರೆ. ಅಂಕೋಲಾ ತಾಲೂಕಿನಲ್ಲಿ 6276 ಮಂದಿ, ದಾಂಡೇಲಿಯಲ್ಲಿ 94, ಹಳಿಯಾಳ 95, ಕಾರವಾರದಲ್ಲಿ 5298, ಕುಮಟಾದಲ್ಲಿ 2870, ಮಂಡಗೋಡದಲ್ಲಿ 76, ಸಿದ್ದಾಪುರದಲ್ಲಿ 284, ಶಿರಸಿಯ 78 ಹಾಗೂ ಯಲ್ಲಾಪುರದಲ್ಲಿ 275 ಮಂದಿ ಈ ಪ್ರವಾಹದಿಂದಾಗಿ ಸಂತ್ರಸ್ತರಾಗಿದ್ದಾರೆ ಎಂಬ ಮಾಹಿತಿ ಲಭಸಿದೆ.

https://vismaya24x7.com/wp-content/uploads/2021/07/hegde-divag-2.mp4
ನೆರೆಹಾವಳಿಯ ಕೆಲ ದೃಶ್ಯಗಳು

ಹೊನ್ನಾವರ, ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ತಲಾ ಓರ್ವರು ಈ ಮಳೆಯಿಂದಾಗಿ ಮೃತಪಟ್ಟಿದ್ದಾರೆ. ಅಂಕೋಲಾದಲ್ಲಿ ಇಬ್ಬರು ಹಾಗೂ ಯಲ್ಲಾಪುರದಲ್ಲಿ ಓರ್ವರು ಕಣ್ಮರೆಯಾಗಿದ್ದಾರೆ. 59 ಮನೆಗಳಿಗೆ ಪೂರ್ಣ ಪ್ರಮಾಣದ ಹಾನಿ ಸಂಭವಿಸಿದೆ. 281 ಮನೆಗಳಿಗೆ ಭಾಗಶಃ ಹಾನಿಯಾಗಿವೆ. 45 ಜಾನುವಾರುಗಳು ಕಣ್ಮರೆಯಾಗಿವೆ. ಜಿಲ್ಲೆಯಲ್ಲಿ 136 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್…

Exit mobile version