Follow Us On

WhatsApp Group
Important
Trending

ಮನೆ ಮಹಡಿ ಹತ್ತಿ ಜೀವ ಉಳಸಿಕೊಂಡ ಕುಟುಂಬ: ಮೈ ಜಲ್ ಎನ್ನಿಸುವ ಕಾರ್ಯಾಚರಣೆ ದೃಶ್ಯ

ಕಾರವಾರ: ಮಳೆ ಕಡಿಮೆಯಾದ ಕಾರಣ ಕದ್ರಾ ಜಲಾಶಯದಿಂದ ಹೊರಹಾಕಲಾಗುತ್ತಿದ್ದ ನೀರಿನ ಪ್ರಮಾಣ ಕಡಿಮೆ ಮಾಡಲಾಗುತ್ತಿದ್ದು, ಇದೀಗ ನೀರು ಇಳಿಕೆಯಾಗತೊಡಗಿದೆ. ಆದರೆ ಪ್ರವಾಹದಿಂದ ಮುಳುಗಡೆಯಾದ ಮನೆಗಳ ಮೇಲೆ ಹತ್ತಿ ಜೀವ ಉಳುಸಿಕೊಂಡ ದೃಶ್ಯಗಳನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಭಯಾನಕ ಸ್ಥಿತಿಯನ್ನು ಅನಾವರಣ ಗೊಳಿಸುತ್ತಿವೆ. ಹೌದು ಕದ್ರಾ ಜಲಾಶಯದಿಂದ ನೀರನ್ನು ಹೊರ ಬಿಟ್ಟ ಕಾರಣ ಜಲಾಶಯದ ಸಮೀಪವೇ ಇರುವ ಗಾಂಧಿನಗರಕ್ಕೆ ಏಕಾಏಕಿ ನೀರು ಬಂದಿದ್ದು ಯಾರೊಬ್ಬರು ಮನೆ ಖಾಲಿ ಮಾಡಿರಲಿಲ್ಲ.

ಬಳಿಕ ಜನ ಇರುವುದನ್ನು ತಿಳಿದ ಪೊಲೀಸರು ಕೆಲವರನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರಾದರೂ ಇನ್ನು ಕೆಲವರು ಜಲಬಂಧಿಯಾಗಿದ್ದರು. ನೀರು ಏರುತ್ತಲೆ ಸಾಗಿ ಮುಳುಗುವ ಹಂತಕ್ಕೆ ತಲುಪಿದಾಗ ತಗಡಿನ ಮನೆ ಮಹಡಿ ಮೇಲೆ ಹತ್ತಿ ಆಶ್ರಯ ಪಡೆದಿದ್ದರು. ಅದೃಷ್ಟವಸಾತ್ ಮನೆ ಮಹಡಿಗೆ ತಾಗುವ ರಿತಿ ನೀರು ಹರಿಯುತ್ತಿದ್ದರು ಆಕ್ಷಣ ಮನೆ ಹಾನಿಯಾಗಿರಲಿಲ್ಲ.

ಕೊನೆಗೆ ನೌಕಾನೆಲೆಯ ರಕ್ಷಣಾ ತಂಡ ಇದೇ ರಿತಿ ಸಂಕಷ್ಟಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಜರನ್ನ ರಕ್ಷಣೆ ಮಾಡಿದ್ದಾರೆ. ಮಹಡಿ ಮೇಲೆ ಆಶ್ರಯ ಪಡೆದಿದ್ದ ಜನ ಈ ದ್ರಶ್ಯಗಳನ್ನ ಸೆರೆ ಹಿಡಿದಿದ್ದು ಭಯಾನಕ ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತದೆ‌. ಅಲ್ಲದೆ ದುರದೃಷ್ಟವಶಾತ್ ನೆರೆ ಇಳಿದ ಮೇಲೆ ಈ ಭಾಗದ ಎಲ್ಲ ಮನೆಗಳು ನೆಲಸಮವಾಗಿದ್ದು ಈ ಕುಟುಂಬಗಳು ಬೀದಿಗೆ ಬರುವಂತಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button