Big News

ದನದ ಮಾಂಸ‌ ಅಕ್ರಮವಾಗಿ ಸಾಗಾಟ ಮಾಡುತ್ತಿರುವಾಗ ಹಿಡಿದು ಧರ್ಮದೇಟು? ಅಲ್ಲಿ ನಡೆದಿದ್ದು ಘಟನೆ ಏನು? Video News

ಭಟ್ಕಳ: ಅಕ್ರಮವಾಗಿ ಕಾರೊಂದರಲ್ಲಿ 200 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆ ಶಿರಾಲಿ ಸರ್ಕಲ್ ಸಮೀಪ ಕಾರ ತಡೆದು ಓರ್ವ ಆರೋಪಿಯ ಮೇಲೆ 7 ರಿಂದ 8 ಜನ ಹಲ್ಲೆ ಮಾಡಿರುವ ಘಟನೆ ನಡೆದಿದ್ದು ದೂರಿಗೆ ಪ್ರತಿ ದೂರು ದಾಖಲಾಗಿದೆ.

ಆರೋಪಿಗಳನ್ನಾಗಿ ಸಲಿಂ ಇಬ್ರಾಹಿಂ ಸಾಬ್ , ನಬಿ ಕಾಟನಳಿ ಹಾಗೂ ತಬ್ರೇಜ್ ಎಂದು ತಿಳಿದು ಬಂದಿದೆ.
ಇವರು ಇಲ್ಲಿಯೋ ಜಾನುವಾರನ್ನು ವದೆ ಮಾಡಿ ಸುಮಾರು 40 ಸಾವಿರ ಮೂಲ್ಯದ 200 ಕೆಜಿ ಆಗುವಷ್ಟು
ಮಾಂಸವನ್ನು ಯಾವುದೇ ಪಾಸ್ ಪರವಾನಿಗೆ ಇಲ್ಲದೆ
ಟಾಟಾ ಇಂಡಿಕಾ ಕಾರಿನಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದರು.

ವಿಡಿಯೋ ಇಲ್ಲಿದೆ ನೋಡಿ

ಈ ವೇಳೆ ಶಿರಾಲಿ ಸರ್ಕಲ್ ಸಮೀಪ 7 ರಿಂದ 8 ಜನ ಕಾರಿನಲ್ಲಿ ದನ ಮಾಂಸ ಇರುವುದನ್ನು ತಿಳಿದು ದನದ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಗೆ ಕಾರಿನಿಂದ ಇಳಿಸಿ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ಮಾಡಿ ಕಾರನ್ನು ಜಖಂ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಪೊಲೀಸರು ಬರುತ್ತಿದ್ದಂತೆ 7ರಿಂದ 8 ಜನ ಸ್ಥಳದಿಂದ ಪರಾರಿಯಾಗಿದ್ದು, ನಂತರ ಪೊಲೀಸರು ದನದ ಮಾಂಸ ಸಾಗಾಟ ಮಾದುಡಿದ್ದ ಆರೋಪಿಯನ್ನು ಕಾರಿನ ಸಮೇತ ಬಂಧಿಸಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರಿಗೆ ಪ್ರತಿದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button