ಹದಗೆಟ್ಟ ರಸ್ತೆ, ಅರೆಬರೆ ಕೆಲಸದಿಂದ ಕುಮಟಾ-ಶಿರಸಿ ರಸ್ತೆಯಲ್ಲಿ ಸಂಚಾರಕ್ಕೆ ಕಾಡುತ್ತಿದೆ ಸಮಸ್ಯೆ: ಬೈಕ್ ಸವಾರರ ಗೋಳು ಹೇಳತೀರದು

ಕುಮಟಾ: ಇತ್ತಿಚೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ, ಹಲವೆಡೆ ಭೂಕುಸಿತ ಉಂಟಾಗಿದ್ದು, ರಸ್ತೆ ಸಂಚಾರಕ್ಕೂ ತೊಂದರೆಯಾಗಿದೆ. ಪ್ರಮುಖವಾಗಿ ಯಲ್ಲಾಪುರ ಮತ್ತು ಜೋಯ್ಡಾ ಭಾಗದಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಇದರಿಂದಾಗಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರುತ್ತಿರುವ ಕುಮಟಾ-ಶಿರಸಿ ರಸ್ತೆಯ ಮೇಲೆ ಸಂಚಾರ ದಟ್ಟನೆ ವಿಪರೀತ ಹೆಚ್ಚಿದೆ.
ಅರೆಬರೆ ಕೆಲಸ , ಮತ್ತೊಂದೆಡೆ ವಿಪರೀತ ಸಂಚಾರ ದಟ್ಟಣೆಯಿಂದ ರಸ್ತೆ ಮತ್ತಷ್ಟು ಹದಗಟ್ಟಿದ್ದು, ಅದರಲ್ಲೂ ಹೆಗಡೆಕಟ್ಟಾ ಕ್ರಾಸ್ ಸಮೀಪ ಐದಾರು ಕಿಲೋಮೀಟರ್ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಚಲಿಸುವುದು ಇಲ್ಲಿ ಕಷ್ಟಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂ ರಾಗಿಹೊಸಳ್ಳಿ, ಅಮಿನಳ್ಳಿ ಸೇತುವೆ ಕೂಡಾ ಭದ್ರವಾಗಿಲ್ಲ. ಇದೀಗ ಭಾರ ವಾಹನಗಳು ಚಲಿಸುತ್ತಿವೆ. ಕುಮಟಾದಿಂದ ಶಿರಸಿ ಪ್ರಯಾಣ ಇದೀಗ ಎರಡು -ಎರಡು ವರೆ ತಾಸು ಹಿಡಿಯುತ್ತಿವೆ. ಬೈಕ್ ಸವಾರರು , ಕೆಸರುಗದ್ದೆಯಂತಾದ ರಸ್ತೆಯಲ್ಲಿ ಚಲಿಸುವುದೇ ದುಸ್ತರವಾಗಿದೆ.
ಇಂದಿನ ಪ್ರಮುಖ ಸುದ್ದಿಗಳ ಲಿಂಕ್ ಇಲ್ಲಿದೆ
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ
- ಭಟ್ಕಳದ ಬೈಲೂರಿನಲ್ಲಿ ವಾತ್ಸಲ್ಯ ಮನೆ ಹಸ್ತಾಂತರ: ಸಂಸ್ಥೆಯ ಸಮಾಜಮುಖಿ ಕೆಲಸಕ್ಕೆ ಮೆಚ್ಚುಗೆ
- ಬೇಸಿಗೆ ರಜೆ ನಿಮಿತ್ತ 20 ದಿನಗಳ ಸಂಗೀತ ಸಂಸ್ಕಾರ ಶಿಬಿರ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್