Uttara Kannada
Trending

ಉತ್ತರಕನ್ನಡದ ಇಂದಿನ ಕರೊನಾ ವಿವರ: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡದಲ್ಲಿ ಇಂದು ಕಳೆದ ಎರಡು ಮೂರು ವಾರಗಳಿಗಿಂತ ಹೆಚ್ಚಿನ ಕೋವಿಡ್ ಪ್ರಕರಣ ದಾಖಲಾಗಿದೆ. ಇಂದು 81 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೇ ವೇಳೆ ಶಿರಸಿಯಲ್ಲಿ 1 ಸಾವಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ‌ ಸಂಖ್ಯೆ 735ಕ್ಕೆ ಏರಿಕೆಯಾಗಿದೆ.

ಕುಮಟಾದಲ್ಲಿ 11, ಹೊನ್ನಾವರ 2, ಭಟ್ಕಳದಲ್ಲಿ 8, ಶಿರಸಿಯಲ್ಲಿ 11, ಕಾರವಾರದಲ್ಲಿ 9, ಅಂಕೋಲಾದಲ್ಲಿ 32, ಸಿದ್ದಾಪುರದಲ್ಲಿ 3, ಯಲ್ಲಾಪುರದಲ್ಲಿ 2, ಮುಂಡಗೋಡ 1, ಹಳಿಯಾಳದಲ್ಲಿ 1, ಮತ್ತು ಜೋಯಿಡಾದಲ್ಲಿ 1 ಸೇರಿ ಒಟ್ಟು 81 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕಾರವಾರ 2, ಅಂಕೋಲಾ‌ 8, ಕುಮಟಾ 14, ಹೊನ್ನಾವರ 6, ಭಟ್ಕಳ 4, ಶಿರಸಿ 4, ಸಿದ್ದಾಪುರ 0, ಯಲ್ಲಾಪುರ 1 ಸೇರಿ ಒಟ್ಟು 39 ಮಂದಿ ಗುಣಮುಖರಾಗಿ‌ ಮನೆಗೆ ಮರಳಿದ್ದಾರೆ.

ಅಂಕೋಲಾದಲ್ಲಿಂದು ಕರೊನಾ ಸ್ಪೋಟ :

ಅಂಕೋಲಾ ಅ 3: ತಾಲೂಕಿನಲ್ಲಿ ಮಂಗಳವಾರ ದಿನವೊಂದರಲ್ಲಿಯೇ 32 ಹೊಸ ಕೊವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ, ಒಟ್ಟೂ ಸಕ್ರಿಯ ಪ್ರಕರಣಗಳ ಸಂಖ್ಯೆ 80 ಕ್ಕೆ ಏರಿಕೆಯಾಗಿದೆ.ಸೋಂಕು ಮುಕ್ತರಾದ ಓರ್ವರನ್ನು ಬಿಡುಗಡೆಗೊಳಿಸಲಾಗಿದೆ. ಆಸ್ಪತ್ರೆಗಳಲ್ಲಿ 3 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣವುಳ್ಳ 77 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ.

ಈ ದಿನದ 1 ಸಾವಿನ ಪ್ರಕರಣ ಸೇರಿ ಅರಂಭದಿಂದ ಇಲ್ಲಿವರೆಗೆ ತಾಲೂಕಿನಲ್ಲಿ ಒಟ್ಟೂ 65 ಜನರು ಕರೊನಾದಿಂದ ಮೃತರಾಗಿದ್ದಾರೆ. ಆರಂಭದಿಂದ ಇಲ್ಲಿಯವರೆಗೆ 3428 ಜನರಲ್ಲಿ ಸೋಂಕು ದೃಢಪಟ್ಟಿದೆ

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button