Follow Us On

Google News
Focus News
Trending

ಜಗತ್ತಿಗೇ ತೆರೆದುಕೊಂಡ “ವಿಸ್ಮಯ”ಕ್ಕೆ ಹಿಂದಿನಂತೆಯೇ ಇರಲಿ ನಿಮ್ಮ ಬೆಂಬಲ.

ಕಳೆದ ಆರೇಳು ವರ್ಷಗಳ ಹಿಂದೆ ಅಂಬೆಗಾಲನ್ನಿಟ್ಟು ನಡೆಯಲು ಪ್ರಾರಂಭಿಸಿದ ವಿಸ್ಮಯ ಟಿ.ವಿ.ತನ್ನ ಸುದ್ದಿ ಹಾಗೂ ವೈವಿಧ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿತು.

“ಇದು ನಿಮ್ಮ ಚ್ಯಾನಲ್” ಎಂಬ ಘೋಷವಾಕ್ಯದೊಂದಿಗೆ ಜನತೆಯ ಮನ ತಟ್ಟಿ ಉತ್ತರ ಕನ್ನಡದ ಮನೆ ಮನಗಳಲ್ಲಿ ತನ್ನದೇ ಛಾಪು ಮೂಡಿಸಿತು.

ನಿಖರ ಸುದ್ದಿಗಳ ಮೂಲಕ ಮನೆ ಮಾತಾದ ವಿಸ್ಮಯ ಟಿ.ವಿ.ಯಲ್ಲಿ ಸಾಧಕರನ್ನು , ವಿಶೇಷ ವ್ಯಕ್ತಿಗಳನ್ನು ಗುರುತಿಸಿ ಪರಿಚಯಿಸುವ ಅಪೂರ್ವ ಅವಕಾಶ ನನ್ನದಾಯಿತು.

“ವಿಸ್ಮಯ ಸಂದರ್ಶನ”ದ ಮೂಲಕ ನಿಮ್ಮೆದುರು ಬಂದ ನನ್ನನ್ನು ಅತಿ ಪ್ರೀತಿ ಗೌರವದಿಂದ ಆದರಿಸಿದ್ದೀರಿ.
ಈ ‘ಸಂದರ್ಶನ ಕಾರ್ಯಕ್ರಮ’ದ ‘ಸಂದರ್ಶಕ’ನನ್ನಾಗಿ ನನ್ನನ್ನು ಆಯ್ಕೆಮಾಡಿಕೊಂಡು ನನಗೆ ಅವಕಾಶ ನೀಡಿದ ವಿಸ್ಮಯ ವಾಹಿನಿಯ ಮಾಲಕ ಹಾಗೂ ಪ್ರಧಾನ ಸಂಪಾದಕ ,ಮಿಗಿಲಾಗಿ ಆತ್ಮೀಯರಾದ ಶ್ರೀ ವಿಷ್ಣು ಹೆಗಡೆ ಅವರಿಗೆ ಹೃದಯಾಂತರಾಳದ ಅಭಿವಂದನೆಗಳು.

ಕೇಬಲ್ ಮೂಲಕ ಜನತೆಯನ್ನು ತಲುಪುತ್ತಿರುವ ವಿಸ್ಮಯ ಟಿ.ವಿ.ಯು ಅದರ ಜೊತೆಗೆ ಇದೀಗ ವೆಬ್ ಆವೃತ್ತಿಯಲ್ಲಿಯೂ ತೆರೆದುಕೊಂಡಿದೆ.
ವಿಸ್ಮಯ ಟಿ.ವಿ.ಯಲ್ಲಿನ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಜನತೆಯಿಂದಲೂ ಮೆಚ್ಚುಗೆ ಬರುತ್ತಿತ್ತಾದರೂ ಹೊರ ಜಗತ್ತಿಗೆ ಇವುಗಳ ವೀಕ್ಷಣೆ ಕಷ್ಟಸಾಧ್ಯವಾಗಿತ್ತು.
ಫೇಸ್ ಬುಕ್ , ಯೂ ಟ್ಯೂಬ್ ಅಷ್ಟೇ ಅಲ್ಲದೇ ಇದೀಗ ಅಧಿಕೃತ ವೆಬ್ ಸೈಟ್ ಮೂಲಕವೂ ವಿಸ್ಮಯ ಟಿ.ವಿ.ಯು ಜನತೆಯನ್ನು ತಲುಪುತ್ತಿರುವುದು ಸಂತಸದ ವಿಷಯವಾಗಿದೆ.

ಈ ವೆಬ್ ತಾಣದ ಆರಂಭದಿಂದಾಗಿ ಜನತೆಯ ಬಹುದಿನಗಳ ಬೇಡಿಕೆ ಈಡೇರಿದಂತಾಗಿದ್ದು ಇದು “ವಿಸ್ಮಯ ವಾಹಿನಿ ಬಳಗ”ದ ನಮಗೆಲ್ಲರಿಗೂ ತುಂಬ ಹೆಮ್ಮೆಯ ಸಂಗತಿ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ಕುಮಟಾದಂತಹ ಚಿಕ್ಕ ಪಟ್ಟಣದಲ್ಲಿ ಖಾಸಗೀ ವಾಹಿನಿಯನ್ನು ಪ್ರಾರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೀರ್ತಿ ಶ್ರೀ ವಿಷ್ಣು ಹೆಗಡೆ ಅವರಿಗೆ ಸಲ್ಲುತ್ತದೆ.

ಶ್ರೀ ವಿಷ್ಣು ಹೆಗಡೆ ಅವರ ಸಮರ್ಥ ಸಾರಥ್ಯದ ಈ ‘ವಿಸ್ಮಯ ವಾಹಿನಿಯ ಬಳಗ’ದಲ್ಲಿ ನಾವಿರುವುದು ನಮಗೆಲ್ಲ ಅತ್ಯಂತ ಹೆಮ್ಮೆಯೂ ಕೂಡ.

ನಮ್ಮೆಲ್ಲರ ಕಾರ್ಯವನ್ನೂ ,
ಕಾರ್ಯಕ್ರಮಗಳನ್ನೂ ಮೆಚ್ಚಿ ವಿಸ್ಮಯ ವಾಹಿನಿಯನ್ನು ನಿರಂತರವಾಗಿ ವೀಕ್ಷಿಸುತ್ತ ಪ್ರೀತಿಯಿಂದ ಸಹಕರಿಸುತ್ತ ನಮ್ಮೊಂದಿಗಿರುವ ಸಮಸ್ತ ಆತ್ಮೀಯ ವೀಕ್ಷಕವೃಂದವೇ ನಮಗೆ ಬಲ. ನಿಮ್ಮೊಲುಮೆಯಿಂದಲೇ ವಿಸ್ಮಯ ಟಿ.ವಿ. ಬೆಳಗಿದೆ, ಬೆಳೆದಿದೆ.

ಈವರೆಗೂ ಪ್ರೀತಿಯಿಂದ ವಿಸ್ಮಯ ಟಿ.ವಿಯನ್ನು ಬೆಂಬಲಿಸಿದ ತಾವೆಲ್ಲರೂ, ಹೊಸದಾಗಿ ಶುಭಾರಂಭಗೊಂಡ ಈ ವೆಬ್ ಸೈಟ್ ಆವೃತ್ತಿಯನ್ನೂ ಅಷ್ಟೇ ಪ್ರೀತಿಯಿಂದ ನಿಮ್ಮದಾಗಿಸಿಕೊಳ್ಳುತ್ತೀರೆಂಬ ಅಚಲ ವಿಶ್ವಾಸ ಈ ನಿಮ್ಮ ವಿಸ್ಮಯ ವಾಹಿನಿಯ ಬಳಗಕ್ಕಿದೆ.

ಶುಭಾಶಯಗಳೊಂದಿಗೆ…🙏🏻

  • ಜಯದೇವ ಬಳಗಂಡಿ
    ಸಂದರ್ಶಕರು/ನಿರೂಪಕರು,
    “ವಿಸ್ಮಯ ವಾಹಿನಿ ಬಳಗ”
    ಕುಮಟಾ.
    9448302509

Back to top button
Idagunji Mahaganapati Chandavar Hanuman