Uttara Kannada
Trending

ಡಾ.ಸಿ.ಫರ್ನಾಂಡೀಸ್ ಬ್ಯಾಂಕಿನಿಂದ ಕರೊನಾ ವಾರಿಯರ್ಸ್ ಗೆ ಗೌರವ

ಹೊನ್ನಾವರ: ಕರೋನಾ ಲಾಕ್‌ಡೌನ್ ಸಮಯದಲ್ಲಿ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ಪಟ್ಟಣ ಪಂಚಾಯತಿ ಸಿಬ್ಬಂದಿ ಮತ್ತು ಪೌರ ಕಾರ್ಮಿಕರಿಗೆ ಇಲ್ಲಿಯ ಡಾ. ಸಿ.ಫರ್ನಾಂಡಿಸ್ ಬ್ಯಾಂಕಿನ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿ ಗೌರವ ಸಲ್ಲಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಪೀಟರ್ ಮೆಂಡೊನ್ಸಾ ಮಾತನಾಡಿ ಪಟ್ಟಣ ಪಂಚಾಯತಿ ನೌಕರರು ಮತ್ತು ಪೌರಕಾರ್ಮಿಕರು ಕರೋನಾ ಸೇನಾನಿಗಳಂತೆ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯವಾದುದು. ಇಂಥವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಉಪಾಧ್ಯಕ್ಷ ಕಾಮಿನ್ ಲೋಪಿಸ್, ನಿರ್ದೇಶಕರಾದ ಹೆನ್ರಿ ಲೀಮಾ, ಎಪಿಫನ್ ಫರ್ನಾಂಡಿಸ್, ಅಮಿತ್ ಗೋನ್ಸಾಲ್ವೀಸ್, ಅಣ್ಣಪ್ಪ ನಾಯ್ಕ, ಜೂಲೆಟ್ ಮಿರಾಂದಾ, ಪ್ರಧಾನ ವ್ಯವಸ್ಥಾಪಕ ಜೋನ್ ಜೋಸೆಫ್, ಪ.ಪಂ.ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ವೆಂಕಟೇಶ ನಾಯ್ಕ, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.

Related Articles

Back to top button