ವಿಸ್ಮಯ ಜಗತ್ತು
Trending

ವರದಹಳ್ಳಿಯಲ್ಲಿ ಭಕ್ತರ ಭೇಟಿಗಿಲ್ಲ ಅವಕಾಶ: ಲಾಕ್‌ಡೌನ್ ಮುಂದುವರಿಕೆ

ಪ್ರಸಿದ್ಧ ಸಿದ್ಧಿಕ್ಷೇತ್ರ ವರದಪುರದ ಶ್ರೀಧರಾಶ್ರಮದಲ್ಲಿ ಸ್ಥಳೀಯ ಪರಿಸರ ಹಾಗೂ ಈ ಪ್ರಾಂತ್ಯದ ಜನಜೀವನದ ಆರೋಗ್ಯ, ಸಾಮಾಜಿಕ ಸ್ವಾಸ್ಥö್ಯಕ್ಕೆ ಪ್ರಾಮುಖ್ಯತೆ ನೀಡಿ ಲಾಕ್ ಡೌನ ಅನ್ನು ಅನಿವಾರ್ಯವಾಗಿ ಮುಂದುವರೆಸಲು ಶ್ರೀಧರ ಸೇವಾ ಮಹಾಮಂಡಲ ತೀರ್ಮಾನಿಸಿದೆ. ವರದಪುರ ಕ್ಷೇತ್ರವನ್ನು ಮಾರ್ಚ್ ೨೦ ರಿಂದಲೇ ಲಾಕ್ ಡೌನ್ ಮಾಡಿ ಭಕ್ತರ ಪ್ರವೇಶವನ್ನು ಸರ್ಕಾರದ ಆದೇಶಕ್ಕೆ ಪೂರಕವಾಗಿ ನಿರ್ಬಂಧಿಸಲಾಗಿದೆ. ಆಶ್ರಮದ ಪರಿಸರ, ಆಶ್ರಮ ವಾಸಿಗಳ ಆರೋಗ್ಯ ದೃಷ್ಟಿಯಿಂದ ಮತ್ತು ಆಶ್ರಮದ ಸುತ್ತಮುತ್ತಲಿರುವ ಗ್ರಾಮಗಳ ಜನರ ಆರೋಗ್ಯದ ದೃಷ್ಟಿಯಿಂದ ಆಶ್ರಮದ ಲಾಕ್‌ಡೌನ್ ತೆರವುಗೊಳಿಸಲು ಇದು ಸಕಾಲವಲ್ಲವೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಹಾಮಂಡಲ ಮಾಹಿತಿ ನೀಡಿದೆ.

Related Articles

Back to top button