vismaya jagattu
Trending

Gandhi Jayanti Speech in Kannada: ಗಾಂಧಿಜಯಂತಿ ಭಾಷಣ

ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಗೆ ಬೇಕಾದ ಉಪಯುಕ್ತ ಮಾಹಿತಿ ಇಲ್ಲಿದೆ

ರಾಷ್ಟ್ರಪಿತ ಮಹತ್ಮಾಗಾಂಧೀಜಿಯವರು ಅಹಿಂಸಾತ್ಮಕ ಪ್ರತಿರೋಧಕ್ಕಾಗಿ ಹೆಸರುವಾಸಿಯಾದವರು. ಗಾಂಧಿಯವರ ಅಹಿಂಸೆ, ಸತ್ಯ ಮತ್ತು ಸರಳತೆಯ ತತ್ವಗಳು ವಿಶ್ವದಾದ್ಯಂತ ಜನರನ್ನು ಪ್ರೇರೇಪಿಸಿವೆ. ಪ್ರತಿವರ್ಷ ಅಕ್ಟೋಬರ್ 2 ರಂದು ದೇಶಾದ್ಯಂತ ಗಾಂಧಿ ಜಯುಂತಿಯನ್ನು ಆಚರಿಸಲಾಗುತ್ತದೆ. ಅಂದು ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ( Gandhi Jayanti Speech in Kannada) ಆಯೋಜಿಸುವುದು ಸಾಮಾನ್ಯವಾಗಿದೆ. ಭಾಷಣಗಳು, ಸಾಂಸ್ಕೃತಿಕ ಪ್ರದರ್ಶನಗಳು ಗಾಂಧಿಯವರ ಜೀವನ, ಸಾಧನೆ, ಅವರ ಹೋರಾಟದ ಕುರಿತು ಚರ್ಚೆಗಳನ್ನು ಒಳಗೊಂಡಿರುತ್ತವೆ.

ಗಾಂಧಿಜಯಂತಿಯ ಭಾಷಣ, ಪ್ರಬಂಧ ಹೇಗಿರಬೇಕು? ( Gandhi Jayanti Speech in Kannada ) ಎಂಬ ಪ್ರಶ್ನೆಗೆ ಕೆಲ ಸಲಹೆಗಳು ಇಲ್ಲಿವೆ. ಶಾಲಾ ಕಾಲೇಜುಗಳಲ್ಲಿ ಭಾಷಣ ಮಾಡುವವರು, ಮಹಾತ್ಮಾ ಗಾಂಧಿಯವರ ಜೀವನ ಮತ್ತು ಕೆಲಸದ ಬಗ್ಗೆ ಮಾತನಾಡಬಹುದು.  ಅವರ ಅಹಿಂಸೆ, ಸತ್ಯದ ತತ್ವಗಳ ಬಗ್ಗೆ ಹೇಳಬಹುದು. ಅವರ ಅಹಿಂಸಾ ತತ್ವಗಳು ವಿಶ್ವದಾದ್ಯಂತ ಜನರನ್ನು ಹೇಗೆ ಪ್ರೇರೇಪಿಸಿವೆ ಎಂಬುದನ್ನು ವಿವರಿಸಬಹುದು.

ಗಾಂಧಿಜಯಂತಿಯ ಶುಭಾಶಯಗಳು

ಗಾಂಧೀಜಿಯವರ ಅಹಿಂಸೆಯ ಮಹತ್ವವನ್ನು ಸಾಮಾಜಿಕ ಬದಲಾವಣೆಯನ್ನು ಸಾಧಿಸುವಲ್ಲಿ ಚರ್ಚಿಸಬಹುದು.  ಗಾಂಧಿಯವರ ತತ್ವಗಳನ್ನು ನಮ್ಮ ಸ್ವಂತ ಜೀವನಕ್ಕೆ ಹೇಗೆ ಅನ್ವಯಿಸಬಹುದು ಎಂಬುದನ್ನು ವಿವರಿಸಬಹುದು. ಗಾಂಧಿ ಮತ್ತು ಭಾರತಕ್ಕೆ ಅವರ ಮಹತ್ವವನ್ನು ಪರಿಚಯಿಸುವ ಮೂಲಕ ಪ್ರಾರಂಭಿಸಬುದು. ನೀವು ಅವರ ಜೀವನ, ಅವರ ಕೆಲಸ ಮತ್ತು ಅವರ ಪರಂಪರೆ ಬಗ್ಗೆ ಮಾತನಾಡಬಹುದು. ಉಪ್ಪಿನ ಸತ್ಯಾಗ್ರಹ ಮತ್ತು 1942ರಲ್ಲಿ ಬ್ರಿಟಿಷರ ಕ್ವಿಟ್ ಇಂಡಿಯಾ ಚಳವಳಿ, ಅವರ ಸತ್ಯ ಮತ್ತು ಅಹಿಂಸೆಯ ಹಾದಿಯನ್ನು ವಿವರಿಸಬಹುದು.

ಗಾಂಧಿಯವರ ತತ್ವಗಳೇನು? ಇಂದಿಗೂ ಅದು ಪ್ರಸ್ತುತವೇ? ಗಾಂಧಿಯವರ ಅಹಿಂಸೆ, ಸತ್ಯ ಮತ್ತು ಸರಳತೆಯ ತತ್ವಗಳ ಬಗ್ಗೆ ಚರ್ಚಿಸಬಹುದು. ಈ ತತ್ವಗಳು ಇಂದಿನ ಜಗತ್ತಿಗೆ ಹೇಗೆ ಸಂಬoಧಿಸಿವೆ? ಮಹತ್ಮಾಗಾಂಧಿಯವರ ಹೋರಾಟ ಭಾರತದ ಸ್ವಾತಂತ್ರ‍್ಯ ಸಾಧಿಸಲು ಹೇಗೆ ಸಹಾಯ ಮಾಡಿದೆ ಎಂಬುದನ್ನು ತಿಳಿಸಬಹುದು. ಅಂದು ಅವರ ತತ್ವಗಳು ಭಾರತವನ್ನು ಹೇಗೆ ಪ್ರಭಾವಿಸಿತು? ಈ ಎಲ್ಲಾ ಅಂಶಗಳನ್ನು ಬಳಸಿಕೊಂಡು ಉತ್ತಮ ಭಾಷಣ ಅಥವಾ ಪ್ರಬಂಧನ್ನು ಬರೆಯಬಹುದಾಗಿದೆ.

ಸಂದೀಪ್ ಎಸ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button