ಕಾರವಾರ: ಹೆದ್ದಾರಿಯಲ್ಲಿ ಕಾರು ನಿಲ್ಲಿಸುವಂತೆ ಪೊಲೀಸರು ಕೈ ಸನ್ನೆ ಮಾಡಿದ್ದರೂ ಸಹ ನಿಲ್ಲಸದೇ ಪರಾರಿಯಾಗುತ್ತಿದ್ದ ವೇಳೆ ಅಬಕಾರಿ ಸಿಬ್ಬಂದಿಗಳು ಕಾರನ್ನು ಬೆನ್ನಟ್ಟಿ ಹೋಗಿ ಅಕ್ರಮವಾದ ಮದ್ಯ ಮತ್ತು ಇಬ್ಬರು ಆರೋಪಿಗಳೊಂದಿಗೆ 2.20 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಮಾಜಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಕ್ರಮವಾಗಿ ಗೋವಾ ಸರಾಯಿಯನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಚಾಲಕ ನಾಗರಾಜ ಗೌಡ (36) ಹಾಗೂ ವಜ್ರಳ್ಳಿ ಗ್ರಾಮದ ರವಿಕುಮಾರ ಪೂಜಾರಿ (24) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್ ಕಾರವಾರ
- ಹೆಂಡತಿ ಮನೆ ಎದುರು ಸಾವಿಗೆ ಶರಣಾದ ವಿಚ್ಛೇದಿತ
- ಮುರ್ಡೇಶ್ವರ ಮಹಾರಥೋತ್ಸವಕ್ಕೆ ಸರ್ವರಿಗೂ ಸ್ವಾಗತ
- ಶಾಲಾ ಅಡುಗೆ ಸಿಬ್ಬಂದಿ ನೀರು ತರಲು ಹೋದಾಗ ಕಂಡಿದ್ದೇನು ? ಬಾವಿಯ ಗಡಗಡೆಗೆ ಕಟ್ಟಿದ್ದ ಹಗ್ಗದ ಇನ್ನೊಂದು ತುದಿಯಲ್ಲಿ ನೇತಾಡುತ್ತಿತ್ತು ಮೃತದೇಹ
- ತಾಯಿ ಬಳಿ ಮಾರುಕಟ್ಟೆಗೆ ಹೋಗಿ ಬರುತ್ತೇನೆಂದು ಹೋದವನು ಸಾವಿಗೆ ಶರಣು
- ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು: ಯುವತಿ ಸಾವು, 9 ಮಂದಿಗೆ ಗಾಯ