Big News
Trending

ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಅಂಕೋಲಾದ ಪ್ರಕಾಶ ಖಾರ್ವಿ

ಜಿಲ್ಲೆಯಾದ್ಯಂತ ರಕ್ತ ಸಂಬoಧ ಬೆಸೆಯುವ ಸಾಮಾಜಿಕ ಜಾಲತಾಣಗಳು(ಯುವಕರು)
ಕೋವಿಡ್ ಸಂಕಷ್ಟ ಕಾಲದಲ್ಲಿಯೂ ರಕ್ತದಾನದ ಮೂಲಕ ಮಾದರಿ ಕಾರ್ಯ.

ಅಂಕೋಲಾ: ಬೆಳಂಬಾರ ಗ್ರಾಮದ ಯುವ ಉದ್ದಿಮೆದಾರ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪ್ರಕಾಶ ಎಂ.ಖಾರ್ವಿ(ಲಕ್ಷ್ಮೇಶ್ವರ), ತುರ್ತು ಸಂದರ್ಭದಲ್ಲಿ ಕಾರವಾರಕ್ಕೆ ತೆರಳಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಪರೂಪದ ಕಾಯಿಲೆ ಥಲಸ್ಸೆಮಿಯಾ: ಥಲಸ್ಸೆಮಿಯಾ ಎಂಬುದು ಬಹಳ ಅಪರೂಪದ ಕಾಯಿಲೆಯಾಗಿದ್ದು, ರೋಗಿಗಳಲ್ಲಿ ಹೊಸ ರಕ್ತ ಕಣಗಳ ಉತ್ಪತ್ತಿಗೆ ತೊಡಕ್ಕಾಗಿ ರೋಗಿಯ ಜೀವ ಉಳಿಸಲು ನಿರಂತರವಾಗಿ ರಕ್ತ ಮುರುಪೂರಣ ಮಾಡಲೇ ಬೇಕಾಗುತ್ತದೆ. ಅಂಕೋಲಾ ತಾಲೂಕಿನ 6ರ ಪುಟಾಣಿ ಬಾಲಕನೋರ್ವನಲ್ಲಿಯೇ ಈ ರೋಗ ಲಕ್ಷಣ ಕಂಡು ಬಂದಿದ್ದು ಆತನ ಹೆತ್ತವರು ಈ ಹಿಂದೆ ದೂರದ ಮಂಗಳೂರಿಗೆ ತೆರಳಿ ರಕ್ತ ಕೊಡಿಸಿ ಮಗನನ್ನು ಮನೆಗೆ ಕರೆತರತ್ತಿದ್ದರು ಎನ್ನಲಾಗಿದ್ದು, ಲಾಕ್‌ಡೌನ್ ಅವಧಿಯಲ್ಲಿ ನಾನಾ ಕಾರಣಗಳಿಂದ ದೂರದ ಆಸ್ಪತ್ರೆಗೆ ತೆರಳಲಾರದೇ ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿಯೇ ರಕ್ತ ಮುರುಪೂರಣ ಮಾಡಿಸಿದ್ದರು ಎಂದು ಹೇಳಲಾಗಿದೆ.©Copyright reserved by Vismaya tv
ಮತ್ತೊಮ್ಮೆ ಅದೇ ಬಾಲಕನಿಗೆ ರಕ್ತದ ಅವಶ್ಯಕತೆ ಇದ್ದು ಈ ಕುರಿತು ಬೊಬ್ರುವಾಡದ ಗಜಾನನ ಆರ್ ನಾಯ್ಕ ಮತ್ತಿತರರು ಸಾಮಾಜಿಕ ಜಾಲತಾಣಗಳಲ್ಲಿ ರಕ್ತದಾನಿಗಳು ನೆರವು ನೀಡುವಂತೆ ಕೋರಿಕೊಂಡಿದ್ದರು. ಈ ಸಂದೇಶವನ್ನು ತಿಳಿದ ಪ್ರಕಾಶ ಖಾರ್ವಿ ತಾವೇ ಸ್ವತಃ ಕಾರವಾರಕ್ಕೆ ತೆರಳಿ ಸೋಮವಾರ ರಕ್ತದಾನ ಮಾಡಿ ಬಂದಿದ್ದು, ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಿಲ್ಲಾ ರಕ್ತ ನಿಧಿ ಕೇಂದ್ರದ ರಕ್ತ ವಿಭಾಜನಾ ಕೇಂದ್ರದ ಮೇಲ್ವಿಚಾರಕ ಅರುಣ ಬಿ ನಾಯ್ಕ, ಪ್ರಯೋಗ ಶಾಲಾ ತಂತ್ರಜ್ಞೆ ಸುವರ್ಣಾ ನಾಯ್ಕ, ರಕ್ತ ಸಂಗ್ರಹಿಸಿದರು.

ಎಲ್ಲೆಡೆಯೂ ಕೋವಿಡ್ ಭೀತಿ: ಇತ್ತೀಚಿನ ದಿನಗಳಲ್ಲಿ ಯಾವುದೇ ಕಾಯಿಲೆ ಕಾಣಿಸಿಕೊಂಡು ತಮ್ಮ ಕುಟುಂಬಸ್ಥರೇ ಆಸ್ಪತ್ರೆಗೆ ದಾಖಲಾದರೂ ಅವರ ಬಂಧು-ಬಳಗದವರೇ ಆಸ್ಪತ್ರೆಗೆ ತೆರಳಿ ಸಂಬAಧಿಗಳ ಆರೋಗ್ಯ ವಿಚಾರಿಸಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಎಲ್ಲರಲ್ಲೂ ಕೋವಿಡ್-19 ಭೀತಿ ಕಾಡಲಾರಂಭಿಸಿದೆ. ಇದೇ ವೇಳೆ ಪರರ ಜೀವದ ಉಳಿವಿಗೆ ನಿಸ್ವಾರ್ಥ ಭಾವನೆಯಿಂದ ರಕ್ತದಾನ ಮಾಡಲು ಮುಂದೆ ಬರುವ ರಕ್ತದಾನಿಗಳಿಗೂ ಅಪಾಯದ ಸಾಧ್ಯತೆ ಇರುವುದರಿಂದ ಹಲವರು ಹಿಂದಡಿ ಹಾಕುವಂತಾಗಿದೆ.©Copyright reserved by Vismaya tv

ಜಿಲ್ಲೆಯಾದ್ಯಂತ ರಕ್ತ ಸಂಬoಧ ಬೆಸೆಯುವ ಸಾಮಾಜಿಕ ಜಾಲತಾಣಗಳು(ಯುವಕರು) : ಜಿಲ್ಲೆಯಾದ್ಯಂತ ನಾನಾ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರನೇಕರು ಹಲವು ಬಾರಿ ರಕ್ತದಾನ ಮಾಡಿ ಪ್ರಾಣ ಉಳಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಅವರ ನಡುವೆಯೇ ಕಾರವಾರದ ನೂತನ ಜೈನ್, ವಿನಾಯಕ ನಾಯ್ಕ ಚೆಂಡಿಯಾ, ನಜೀರ್ ಶೇಖ್, ಕುಮಟಾದ ಶ್ರೀಧರ,ಸಂಕೇತ ನಾಯ್ಕ,ಶಿರಸಿಯ ರೋಶನ್,ಗಿರೀಶ ಪಟಗಾರ,ಮಂಜು ನಾಯ್ಕ ನೀಲೆಕಣಿ ಮತ್ತಿತರರು ತಮ್ಮ ಸಂಘ ಸಂಸ್ಥೆಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ರಕ್ತದಾನಿಗಳನ್ನು ಸಂಪರ್ಕಿಸಿ, ಕೋವಿಡ್ ಸಂಕಷ್ಟ ಕಾಲದಲ್ಲಿಯೂ ನೂರಾರು ಜೀವಗಳ ರಕ್ಷಣೆ ಮಾಡಿರುವುದು ಸ್ತುತ್ಯಾರ್ಹವಾಗಿದೆ.

ಅಂಕೋಲಾ ತಾಲೂಕಿನಲ್ಲಿಯೂ ಬಹು ಹಿಂದಿನಿoದಲೂ ವಿವಿಧ ಸಂಘ-ಸAಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು ಸೇರಿದಂತೆ ಸಾಮಾಜಿಕ ಚಿಂತನೆಯ ಸಾವಿರಾರು ಜನರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಚಿನ್ನದಗರಿ ಯುವಕ ಸಂಘದವರೂ ಕಳೆದ 2-3 ತಿಂಗಳ ಅವಧಿಯಲ್ಲಿ ತಮ್ಮ ಗೆಳೆಯರ ಮೂಲಕ 10ರಿಂದ 12ಯುನಿಟ್ ರಕ್ತದಾನ ಮಾಡಿಸಿ ಹೆಚ್ಚಿನ ಸುದ್ದಿ ಮಾಡದೇ ಕೋವಿಡ್ ಸಂಕಷ್ಟ ಕಾಲದಲ್ಲಿ ಹಲವು ಕುಟುಂಬಗಳಿಗೆ ಮಾನವೀಯ ಧೈರ್ಯ ತುಂಬಿದ್ದಾರೆ. ಲಾಕ್‌ಡೌನ್ ಸಂಕಷ್ಟದ ಅವಧಿಯಲ್ಲಿ ಪ್ರತಿನಿತ್ಯ ನೂರಾರು ಮಂದಿಗೆ ಊಟ ನೀಡಿ ಮಾದರಿಯಾಗಿದ್ದ ಬೊಬ್ರವಾಡದ ಗಜಾನನ ನಾಯ್ಕ ನೇತೃತ್ವದ ರಾಜಮುರುಳಿ ಗೆಳಯರ ಬಳಗ, ಇತ್ತೀಚೆಗೆ ರಕ್ತದಾನ ಪ್ರಕ್ರಿಯೆಯಲ್ಲಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣ ಬಳಸಿಕೊಂಡು ಅವಶ್ಯಕತೆ ಇರುವ ಹಲವರಿಗೆ ಸರಿಯಾದ ಸಮಯದಲ್ಲಿ ರಕ್ತ ದೊರೆಯುವಂತೆ ಏರ್ಪಾಟು ಮಾಡಿ ಗಮನ ಸೆಳೆಯುತ್ತಿದ್ದಾರೆ. ಒಟ್ಟಾರೆಯಾಗಿ ಸಾಮಾಜಿಕ ಮತ್ತು ಮಾನವೀಯ ನೆಲೆಯಲ್ಲಿ ರಕ್ತದಾನಕ್ಕೆ ಪ್ರೇರೆಪಣೆ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು, ರಕ್ತ ಸಂಬAಧ ಬೆಸೆಯುವ ಎಲ್ಲಾ ಯುವ ಮಿತ್ರರನ್ನು ಅಭಿನಂದಿಸಲೇ ಬೇಕಿದೆ.©Copyright reserved by Vismaya tv

ಈ ಹಿಂದೆಯೇ ಶಿಬಿರವೊಂದರಲ್ಲಿ ರಕ್ತದಾನ ಮಾಡಲು ಉತ್ಸುಕನಾಗಿದ್ದ ನನಗೆ, ನಿನ್ನ ರಕ್ತದ ಗುಂಪು(ಬಿ ನೆಗೆಟಿವ್), ವಿರಳವಾಗಿರುವದರಿಂದ ತುರ್ತು ಸಂದರ್ಭಗಳಲ್ಲಿ ನಿಮ್ಮ ಸಹಾಯದ ಅವಶ್ಯಕತೆ ಹೆಚ್ಚಿರುತ್ತದೆ ಎಂದು ಸಲಹೆ ನೀಡಿದ್ದ ಲಕ್ಷ್ಮೇಶ್ವರದ ಚಿನ್ನದಗರಿ ಗೆಳೆಯರ ಮಾತಿನಿಂದ ಆ ವೇಳೆ ರಕ್ತದಾನ ಮಾಡಿರಲಿಲ್ಲ. ಇಂದು ಪ್ರಥಮ ಬಾರಿಗೆ ರಕ್ತದಾನ ಮಾಡಿದ ಹೆಮ್ಮೆ ನನಗಿದ್ದು, ನನ್ನ ಈ ಚಿಕ್ಕ ಸೇವಾ ಕಾರ್ಯಕ್ಕೆ ಮನದುಂಬಿ ಹಾರೈಸಿದ ಎಲ್ಲಾ ಗೆಳೆಯರು ಮತ್ತು ಹಿತೈಶಿಗಳ ಪ್ರೋತ್ಸಾಹ ನೆನೆಯುತ್ತೇನೆ. ಮುಂದಿನ ದಿನಗಳಲ್ಲಿಯೂ ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಲು ಸಿದ್ಧನಿದ್ದೇನೆ. ನಾವೆಲ್ಲರೂ ನಿರ್ಭೀತಿಯಿಂದ ರಕ್ತದಾನ ಮಾಡಲು ಮುಂದೆ ಬಂದು ಇತರರಿಗೆ ನೆರವಾಗೋಣ.
-ಪ್ರಕಾಶ ಎಂ.ಖಾರ್ವಿ(ರಕ್ತದಾನಿ)

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”1487″]

Back to top button