Big Newsವಿಸ್ಮಯ ಜಗತ್ತು
Trending

ಆಯಸ್ಸು ಹೆಚ್ಚಿಸುವ ರಹಸ್ಯ ಕಂಡುಕೊಂಡ ವಿಜ್ಞಾನಿಗಳು: ಚಿರಯೌವನ ಪಡೆಯುವ ಕಾಲ ಹತ್ತಿರವಾಗುತ್ತಾ?

ಚೀನಾ ವಿಜ್ಞಾನಿಗಳ ಮಹತ್ವದ ಆವಿಷ್ಕಾರ
ಇಲಿಗಳ ಮೇಲೆ ಪ್ರಯೋಗ ಯಶಸ್ವಿ
ಇಲಿಗಳ ಆಯಸ್ಸಿನ ಪ್ರಮಾಣ ಶೇಕಡಾ 25ರಷ್ಟು ಹೆಚ್ಚಳ

ಬೀಜಿಂಗ್: ತಂತ್ರಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗ್ತಿದೆ. ವಿಜ್ಞಾನಿಗಳು ಸದಾ ಒಂದಿಲ್ಲೊoದು ಆವಿಷ್ಕಾರವನ್ನು ಮಾಡುತ್ತಲೇ ಬಂದಿದ್ದು, ಇದೀಗ ಆಯಸ್ಸನ್ನು ಹೆಚ್ಚಿಸುವ ವಿಧಾನವನ್ನು ಕಂಡುಕೊoಡಿದ್ದಾರೆ. ಹೌದು, ಚೀನಾದ ವಿಜ್ಞಾನಿಗಳು ಇಂಥದೊoದು ಆವಿಷ್ಕಾರವನ್ನು ಮಾಡಿದ್ದಾರೆ ಎನ್ನಲಾಗಿದ್ದು, ಚಿರ ಯೌವನವನ್ನು ಕಂಡುಕೊಳ್ಳುವ ರಹಸ್ಯವನ್ನು ಕಂಡುಕೊoಡಿದ್ದಾರೆ.

ಚೀನಾದ ಸಿಎಎಸ್ ವಿಜ್ಞಾನಿಗಳ ತಂಡ ಇಂಥದೊoದು ಸಂಶೋಧನೆ ಮಾಡಿದ್ದು, ಇಲಿಗಳ ಮೇಲೆ ಇವುಗಳನ್ನು ಪ್ರಯೋಗ ಮಾಡಲಾಗಿದೆಯಂತೆ! ಇದರಿಂದಾಗಿ ಇಲಿಗಳು ವಯೋಸಹಜ ಪ್ರಕ್ರಿಯೆಗಳು ನಿಧಾನವಾಗಿದ್ದು, ವಯಸ್ಸಾಗುವಿಕೆಯ ಪ್ರಮಾಣ ಕಡಿಮೆಯಾಗಿದೆಯಂತೆ. ವಯಸ್ಸಾಗುವಿಕೆಯ ಪ್ರಮಾಣ ಕಡಿಮೆಯಾಗುವುದು ಮಾತ್ರವಲ್ಲ, ಆಯಸ್ಸಿನ ಪ್ರಮಾಣ ಶೇಕಡಾ 25 ರಷ್ಟು ಹೆಚ್ಚಳವಾಗಿದೆಯಂತೆ.

ಈ ತಂತ್ರಜ್ಞಾನ ಇನ್ನಷ್ಟು ಮುಂದುವರಿದು, ವಯಸ್ಸಾಗುವಿಕೆಗೆ ಕಾರಣವಾದ ಜೀವಕೋಶವನ್ನು ನಿಷ್ಕ್ರೀಯ ಮಾಡುವ ತಂತ್ರಜ್ಞಾನ ಇನ್ನಷ್ಟು ಸುಧಾರಣೆಯಾದಲ್ಲಿ ಮನುಷ್ಯರ ಮೇಲೆ ಕ್ಲಿನಿಕಲ್ ಟ್ರಯಲ್ ಗೆ ಮನವಿ ಮಾಡಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Related Articles

Back to top button