vismaya jagattu
Trending

Tirupati Darshan: ಬರಿಗಾಲಿನಲ್ಲಿ ತಿರುಪತಿಗೆ ಪಾದಯಾತ್ರೆ

850 ಕಿಲೋಮೀಟರ್ ದೂರವನ್ನು 20 ದಿನಗಳಲ್ಲಿ ಕ್ರಮಿಸವ ಯೋಜನೆ

ಹೊನ್ನಾವರ: ಈ ಇಬ್ಬರು ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ (Tirupati Darshan) ಪಾದಯಾತ್ರೆ ಮೂಲಕ ಹೊರಟಿದ್ದಾರೆ. ಬರಿಗಾಲಿನಲ್ಲಿ 850 ಕಿಲೋಮೀಟರ್ ದೂರವನ್ನು 20 ದಿನಗಳಲ್ಲಿ ಕ್ರಮಿಸಿ, ಸೆಪ್ಟೆಂಬರ್ 07 ರಂದು ಶ್ರೀ ಕ್ಷೇತ್ರ ತಿರುಪತಿಗೆ ತಲುಪಿ, ವೆಂಕಟೇಶ್ವರನ ದರ್ಶನ ಪಡೆಯುವ ಯೋಜನೆ ಹಾಕಿಕೊಂಡಿದ್ದಾರೆ. ಹೌದು, ಕೆಂಚಗಾರ್ ನಿಂದ ಹೊರಟ ಇವರು ಉಡುಪಿ ಬ್ರಹ್ಮಾವರ ಬಳಿಯ ಸಾಸ್ತಾನ ತಲುಪಿ, ಅಲ್ಲಿ ಮತ್ತಷ್ಟು ಪಾದಯಾತ್ರಾರ್ಥಿಗಳ ಜೊತೆ ಸೇರಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳಕೆ ಹೋಗಿ, ಶ್ರೀ ಮಂಜುನಾಥನ ದರ್ಶನ ಪಡೆದು ತಿರುಪತಿಯ ಕಡೆಗೆ ನಡೆಯಲಿದ್ದಾರೆ.

Vishnu Theertha : ವಿಷ್ಣುತೀರ್ಥ: ಸಹಜಸೌಂದರ್ಯದ ಸುಂದರ ಈಜುಕೊಳ

ಈ ಇಬ್ಬರು ಸಾಹಸಿಗಳ ಹೆಸರು ಕೆಂಚಗಾರ್ ರಮೇಶ್ ನಾಯ್ಕ್ ಹಾಗೂ ದರ್ಬೆಜಡ್ಡಿ ಗಣೇಶ ನಾಯ್ಕ್.. ಹೊನ್ನಾವರದ ತಾಲೂಕಿನ ಇವರು ಕೆಂಚಗಾರ್ ವಾದಿರಾಜ ಮಠದ ಶ್ರೀ ಸೀತಾರಾಮಚಂದ್ರ ದೇವರಿಗೆ ಪೂಜೆ ಸಲ್ಲಿಸಿ ಯಾತ್ರೆ ಪ್ರಾರಂಭಿಸಿದ್ದು, ಬರಿಗಾಲಿನಲ್ಲಿ 850 ಕಿಲೋಮೀಟರ್ ದೂರವನ್ನು 20 ದಿನಗಳಲ್ಲಿ ಕೃಮಿಸಲಿದ್ದಾರೆ. ಉಡುಪಿ ಬ್ರಹ್ಮಾವರ ಬಳಿಯ ಸಾಸ್ತಾನ ತಲುಪಿ, ಅಲ್ಲಿ ಮತ್ತಷ್ಟು ಪಾದಯಾತ್ರಾರ್ಥಿಗಳ ಜೊತೆ ಸೇರಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳಕೆ ಹೋಗಿ, ಶ್ರೀ ಮಂಜುನಾಥನ ದರ್ಶನ ಪಡೆದು ತಿರುಪತಿಯ ( Tirupati Darshan) ಕಡೆಗೆ ನಡೆಯಲಿದ್ದಾರೆ.

ಉಡುಪಿ ಬ್ರಹ್ಮಾವರ ಬಳಿಯ ಸಾಸ್ತಾನದಿಂದ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ, ಒಟ್ಟು 200 ಜನ ಭಕ್ತಾಧಿಗಳು ಪಾದಯಾತ್ರೆಯ ಮೂಲಕ ಸೆಪ್ಟೆಂಬರ್ 7 ರಂದು ಶ್ರೀ ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನಕೆ ತಲುಪಲಿದ್ದಾರೆ. ಈ 13 ನೇ ವರ್ಷದ ಪಾದಯಾತ್ರೆಯಲ್ಲಿ, 17 ವರ್ಷ ವಯಸ್ಸಿನಿಂದ 80 ವರ್ಷ ವಯಸ್ಸಿನ ವರೆಗಿನ ಭಕ್ತರು ಇವರ ತಂಡದಲ್ಲಿದ್ದು, ಈ ಪಾದಯಾತ್ರೆಯ ನೇತೃತ್ವ ಮತ್ತು ವೆಚ್ಚವನ್ನು ಭರಿಸುವ ವೆಂಕಟೇಶ್ವರ ಸ್ವೀಟ್ಸ್ ಮಾಲಿಕ ಲಕ್ಷ್ಮೀನಾರಾಯಣ ಅವರು ವೆಂಕಟೇಶ್ವರನ ಪರಮ ಭಕ್ತರು..

ಪಾದಯಾತ್ರೆ ಸಮಯದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಯಿoದ ಹತ್ತು ಗಂಟೆಯ ತನಕ ನಡೆದು, ಬಿಸಿಲಿನಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಪುನಃ ಮದ್ಯಾಹ್ನ ಮೂರು ಗಂಟೆಯಿoದ ರಾತ್ರಿ ಹನ್ನೊಂದು ಗಂಟೆಯ ತನಕ ನಡೆದು, ಬಳಿಕ ಹತ್ತಿರದ ದೇವಾಲಯ, ಸಭಾಭವನದಲ್ಲಿ ಮಲಗಿ ನಿದ್ರಿಸುತ್ತಾರೆ. ಮಾರ್ಗ ಮಧ್ಯ ಸಿಗುವ ಹಳ್ಳ ಹೊಳೆಗಳಲ್ಲಿ ಸ್ನಾನ ಪೂರೈಸುತ್ತಾರೆ. ತಿಂಡಿ ಹಾಗೂ ಊಟಕ್ಕೆ ಅಡುಗೆಯನ್ನು ತಾವೇ ತಯಾರಿಸಿಕೊಳ್ಳುತ್ತಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button