ಉತ್ತರಕನ್ನಡ: ಉತ್ತರಕನ್ನಡ ಜಿಲ್ಲೆ ಪ್ರಾಕೃತಿಕ ಸೌಂದರ್ಯಗಳಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ಲೆಕ್ಕವಿಲ್ಲದಷ್ಟು ನದಿ , ಸರೋವರ, ಜಲಪಾತಗಳಿವೆ. ಇಂಥ ಒಂದು ಸುಂದರ ತಾಣಗಳಲ್ಲಿ ಕುಮಟಾ ತಾಲೂಕಿನ ವಿಷ್ಣುತೀರ್ಥವೂ ( Vishnu Theertha Kumta) ಒಂದು. ಇದು ಸ್ಮಿಮ್ಮಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ನೈಸರ್ಗಿಕ ಈಜುಕೊಳದಂತಿದೆ ಈ ಸ್ಥಳ. ಮಳೆಗಾಲ ಬಂದರೆ ಸಾಕು, ಇಲ್ಲಿ ಬೆಳಿಗ್ಗೆಯಿಂದ ಸಂಜೆಯ ತನಕ ಹೌಸ್ ಫುಲ್ ಆಗಿರುತ್ತದೆ ವಿಷ್ಣುತೀರ್ಥ.
ಇತ್ತಿಚೆಗೆ ವಿಷ್ಣುತೀರ್ಥ ಹೊರಜಿಲ್ಲೆಗಳ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಷ್ಣುತೀರ್ಥದ ಫೋಟೋ, ವಿಡಿಯೊ ನೋಡಿಕೊಂಡು ಪ್ರವಾಸಿಗರು ಇಲ್ಲಿಗೆ ಭೇಟಿಕೊಡುತ್ತಿದ್ದಾರೆ. ಈಜುಪ್ರಿಯರಂತೂ, ಇಲ್ಲಿ ಸ್ಮಿಮ್ಮಿಂಗ್ ಮಾಡಿ, ಆನಂದಿಸುತ್ತಿದ್ದಾರೆ. ಫ್ರಿವೆಡ್ಡಿಂಗ್ ಮತ್ತು ಫೋಟೋಶೂಟ್‌ಗಳು ಇಲ್ಲಿ ಹೆಚ್ಚು ಹೆಚ್ಚು ಜನಪ್ರಿಯಗೊಳ್ಳುತ್ತಿದೆ.
( Vishnu Theertha Kumta) ಇಲ್ಲಿನ ಬೃಹತ್ ಕೆರೆಯ ಎದುರಿನಲ್ಲೇ ಬಹಳ ಪುರಾತನ ದೇಗುಲವಿದೆ. ಹಚ್ಚ ಹಸಿರಿನ ಸುಂದರ ತಾಣದ ನಡುವೆ, ದೇವಸ್ಥಾನವಿದ್ದು, ಇದು ಸ್ಥಳೀಯರ ಆರಾಧ್ಯದೈವ.. ಒಟ್ಟಿನಲ್ಲಿ ದೇವಸ್ಥಾನ, ಹಚ್ಚ ಹಸಿರಿನ ಪ್ರಕೃತಿ, ವಿಷ್ಣುತೀರ್ಥದ ಸೌಂದರ್ಯವನ್ನು, ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ.
ಇಲ್ಲಿಗೆ ಹೋಗುವುದು ಹೇಗೆ?: ಕುಮಟಾದಿಂದ ಚಿತ್ರಗಿ ರಸ್ತೆಯ ಸನಿಹದಲ್ಲೇ ವಿಷ್ಣುತೀರ್ಥವಿದ್ದು, Kumta Bustand ನಿoದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ. ದೇವಸ್ಥಾನ ಇರುವುದರಿಂದ ಇಲ್ಲಿ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯವಾಗಿದೆ.
ವಿಸ್ಮಯ ನ್ಯೂಸ್, ಕುಮಟಾ