Follow Us On

WhatsApp Group
Special
Trending

ನಿಮ್ಮ ಮನೆಗೂ ಉಚಿತ ಸೋಲಾರ್ ವಿದ್ಯುತ್ ಸಂಪರ್ಕ ಬೇಕಾ? ಹೆಚ್ಚುವರಿ ವಿದ್ಯುತ್ ಮಾರಾಟಕ್ಕೆ ಅವಕಾಶ: ಸಬ್ಸಿಡಿ ಸೌರ ಫಲಕ ಯೋಜನೆಗೆ Apply ಮಾಡಿ

PM Surya Ghar Yojana: ದೇಶಾದ್ಯಂತ ಸುಮಾರು ಒಂದು ಕೋಟಿ ಮನೆಗಳ ಮಲ್ಛಾವಣಿಯಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಮನೆ ಮನೆಗೂ ಉಚಿತ ವಿದ್ಯುತ್ ಒದಗಿಸುವ ಯೋಜನೆ ಇದಾಗಿದ್ದು, ಇದರಿಂದ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ. ಹೌದು, ಈ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸರಕಾರ 75 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ವ್ಯಯಿಸಿದೆ.

ಇದನ್ನೂ ಓದಿ: ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment

ಸಾಮಾನ್ಯವಾಗಿ ಮನೆಯ ಟೆರೆಸ್ ಅಥವಾ ರೂಫ್ ಟಾಪ್ ನಲ್ಲಿ ಸೋಲಾರ್ ವ್ಯವಸ್ಥೆ ಮಾಡಲಾಗುತ್ತದೆ. ಇದನ್ನು ಗ್ರಿಡ್ ಜತೆಗೆ ಸಂಪರ್ಕಿಸುವುದರಿoದ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಉಚಿತವಾಗಲಿದೆ. ಮನೆಗಳ ಮೇಲ್ಛಾವಣೆಯಲ್ಲಿ ಅಳವಡಿಸುವುದರಿಂದ ಹೆಚ್ಚುವರಿ ಜಾಗದ ಅವಶ್ಯಕತೆಯೂ ಇರುವುದಿಲ್ಲ. ಈ ಯೋಜಹನೆಯಿಂದ ಇನ್ನೊಂದು ಅನುಕೂಲವೂ ಇದ್ದು, ಮನೆಗಳಿಗೆ ಉಚಿತ ವಿದ್ಯುತ್ ದೊರೆಯುವುದರ ಜೊತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ, ಲಾಭವನ್ನು ಗಳಿಸಬಹುದಾಗಿದೆ.

PM Surya Ghar Yojana ಯೋಜನೆಯಲ್ಲಿ 1 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ವ್ಯವಸ್ಥೆಗೆ 30 ಸಾವಿರ ರೂಪಾಯಿ ಸಬ್ಸಿಡಿ ದೊರೆಯಲಿದೆ. 2 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಫಲಕದ ವ್ಯವಸ್ಥೆಗೆ 60 ಸಾವಿರ ರೂಪಾಯಿ ಸಬ್ಸಿಡಿ ಮತ್ತು 3 ಕಿಲೋ ವ್ಯಾಟ್ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಬ್ಸಿಡಿ 78 ಸಾವಿರ ರೂಪಾಯಿ ಸಿಗಲಿದೆ. ಆಸಕ್ತ ಸಾರ್ವಜನಿಕರು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಮಾನದಂಡಗಳನ್ನು ನೀಡಲಾಗಿದೆ. ಅರ್ಜಿ ಸಲ್ಲಿಸುವ ವ್ಯಕ್ತಿ ಭಾರತೀಯ ಪ್ರಜೆಯಾಗಿರಬೇಕು. ಅಲ್ಲದೆ, ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಛಾವಣಿಯನ್ನು ಹೊಂದಿರುವ ಮನೆಯನ್ನು ಹೊಂದಿರುದು ಅತ್ಯವಶ್ಯ. ಜೊತೆಗೆ ಮನೆಯವರು ಸೋಲಾರ್ ಪ್ಯಾನೆಲ್‌ಗಳಿಗೆ ಬೇರೆ ಯಾವುದೇ ಸಬ್ಸಿಡಿಯನ್ನು ಪಡೆದಿರಬಾರದು ಎಂಬ ಷರತ್ತು ವಿಧಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ? ಈ ಉಚಿತ ಸೋಲಾರ್ ಯೋಜನೆಯ ಫಲಾನುಭವಿಗಳಾಗಲು ಮೊದಲು ಪೋರ್ಟಲ್ ನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಇದಾದ ಬಳಿಕ ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿಗಳು ಫಲಾನುಭವಿಗಳ ಆಯ್ಕೆ ಮಾಡಲಿವೆ. ನಿಮ್ಮ ಮನೆಯ ವಿದ್ಯುತ್ ಸಂಖ್ಯೆ, ಮೊಬೈಲ್ ಮತ್ತಿತರ ಮಾಹಿತಿ ನೀಡಿ ಪೋರ್ಟಲ್‌ನಲ್ಲಿ ಫಾರ್ಮ್ ಭರ್ತಿ ಮಾಡಬೇಕಿದೆ.

ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button