Follow Us On

WhatsApp Group
Big News
Trending

ಬಸ್ ನಿಲ್ದಾಣದಲ್ಲಿ ನವಜಾತ ಶಿಶುವನ್ನು ಚೀಲದಲ್ಲಿ ತುಂಬಿಬಿಟ್ಟುಹೋದರು : ಅಳುವ ಶಬ್ದ ಕೇಳಿ ಚೀಲ ತೆಗೆದ ಮಹಿಳೆಗೆ ಶಾಕ್

ಈ ನವಜಾತ ಗಂಡು ಮಗು ನಾಲ್ಕೈದು ದಿನದ ಹಿಂದೆ ಜನಿಸಿರುವ ಶಂಕೆಯಿದ್ದು, ಆರು ಬೆರಳನ್ನು ಹೊಂದಿದೆ. ಚೀಲದಲ್ಲಿ ತುಂಬಿ ಇಟ್ಟಿದ್ದರಿಂದ ಮಗುವಿನ ಆರೋಗ್ಯ ಹದಗೆಟ್ಟಿದ್ದು, ದುರುಳರ ಈ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಕೇಳಿಬರುತ್ತಿದೆ.

ಶಿರಸಿ: ಬಸ್ ನಲ್ಲಿ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯೊಬ್ಬಳಿಗೆ ಶಾಕ್ ಕಾದಿತ್ತು. ಹೌದು, ಬಸ್ ನಿಲ್ದಾಣದಲ್ಲಿ ಯಾರೋ ಬಿಟ್ಟು ಹೋಗಿದ್ದ ಚೀಲವನ್ನು ತೆರೆದಾಗ, ಚೀಲದಲ್ಲಿ ನವಜಾತ ಗಂಡು ಮಗು ದೊರೆತಿದೆ. ಇದನ್ನು ನೋಡಿ ಮಹಿಳೆ ಕ್ಷಣಕಾಲ ಕಂಗಾಲಾಗಿದ್ದಾರೆ.

ಈ ಘಟನೆ ನಡೆದಿರೋದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗೌಡಳ್ಳಿ ಸಮೀಪದ ಖಾನ್ ನಗರದ ಬಸ್ ತಂಗುದಾಣದಲ್ಲಿ. ಕೂಲಿ ಕೆಲಸಕ್ಕೆ ಪ್ರತಿ ದಿನ ಬಸ್ ನಲ್ಲಿ ಹೋಗುವಾಗ ತಂಗುದಾಣದಲ್ಲಿ ಚೀಲವೊಂದು ಕಾಣಿಸಿದೆ. ಈ ಚೀಲವನ್ನು ಯಾರೋ ಮರೆತು ಬಿಟ್ಟು ಹೋಗಿರಬೇಕು ಎಂದು ಮಹಿಳೆ ಆ ಚೀಲವನ್ನು ಮನೆಗೆ ತಂದು, ತೆರೆದಿದ್ದಾಳೆ. ಈ ವೇಳೆ ಅಳುವ ಸದ್ದು ಕೇಳಿದ್ದು, ಚೀಲ ತೆಗೆದು ನೋಡಿದಾಗ, ಮಗು ಇರುವುದು ಪತ್ತೆಯಾಗಿದೆ.

ಇದರಿಂದ ಭಯ ಗೊಂಡ ಮಹಿಳೆ ಸ್ಥಳೀಯರಿಗೆ ಮಾಹಿತಿ ನೀಡಿ, ನಂತರ ಪೊಲೀಸರಿಗೂ ಮಾಹಿತಿ ನೀಡಿದ್ದಾಳೆ. ಮಾದೇವಿ ಎಂಬ ಮಹಿಳೆಗೆ ಈ ಮಗು ದೊರೆತಿದ್ದು, ಇದೀಗ ಮಗುವನ್ನು ಶಿರಸಿಯ ಸಹಾಯ ಟ್ರಸ್ಟ್ ಗೆ ಹಸ್ತಾಂತರಿಸಲಾಗಿದೆ..ಚೀಲದಲ್ಲಿ ಮಗುವನ್ನು ತುಂಬಿದ್ದರಿoದ ಮಗು ಅನಾರೋಗ್ಯ ಹದಗೆಟ್ಟಿದ್ದು, ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಅವಧಿಪೂರ್ವ ಜನಿಸಿದ ಶಿಶು ಇದಾಗಿದ್ದು 1.6 ಕೆಜಿ ತೂಕ ಇದೆ ಎನ್ನಲಾಗಿದೆ. ಮಗು ಜನಸಿ ಮೂರ್ನಾಲ್ಕು ದಿನ ಆಗಿರುವ ಸಾಧ್ಯತೆಗಳಿದೆ ಎಂಬ ಮಾಹಿತಿ ದೊರೆತಿದೆ. ಘಟನೆ ಸಂಬoಧ ಪ್ರಕರಣ ಸಹ ದಾಖಲಾಗಿದ್ದು, ಪೋಷಕರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ.

ಯಾರು ಬಿಟ್ಟು ಹೋಗಿದ್ದಾರೆ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಬಸ್ ನಿಲ್ದಾಣದ ಸುತ್ತಮುತ್ತಲಿನವರ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದ್ದು, ಯಾರೆಲ್ಲ ಬಂದು ಹೋಗಿದ್ದಾರೆ ಎಂಬ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಯಾರೋ ಮಹಿಳೆಗೆ ಮದುವೆಗೆ ಮುಂಚೆ ಈ ಮಗು ಜನಿಸಿರುವ ಸಾಧ್ಯತೆಯಿದ್ದು, ತನ್ನ ಪಾಪದ ಕೃತ್ಯ ಬೆಳಕಿಗೆ ಬರುತ್ತದೆ ಎಂಬ ಭಯದಿಂದ ಜನವಸತಿ ಪ್ರದೇಶವಾದ ಬಸ್ ನಿಲ್ದಾಣದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಯಾರಾದರು ಮಗುವನ್ನು ನೋಡಿ, ಸಾಕಲಿ ಅಥವಾ ಮಕ್ಕಳ ಆಶ್ರಯ ಕೇಂದ್ರಕ್ಕೆ ಸೇರಿಸಲು ಎಂಬ ಉದ್ದೇಶದಿಂದಲೇ ಜನವಸತಿ ಪ್ರದೇಶವಾದ ಬಸ್ ನಿಲ್ದಾಣದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ವಿಸ್ಮಯ ನ್ಯೂಸ್, ಶಿರಸಿ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button