ಕಾರವಾರ: ಉತ್ತರಕನ್ನಡದಲ್ಲಿ ಇಂದು 49 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಂದು ಯಾವುದೇ ಸಾವು ಸಂಭವಿಸಿಲ್ಲ.
ಕುಮಟಾದಲ್ಲಿ 5, ಹೊನ್ನಾವರ 9, ಭಟ್ಕಳದಲ್ಲಿ 6,ಕಾರವಾರದಲ್ಲಿ 3, ಅಂಕೋಲಾದಲ್ಲಿ 13,ಬ ಶಿರಸಿಯಲ್ಲಿ 6, ಸಿದ್ದಾಪುರದಲ್ಲಿ 4, ಯಲ್ಲಾಪುರದಲ್ಲಿ 1 ಹಳಿಯಾಳದಲ್ಲಿ 2, ಸೇರಿ ಒಟ್ಟು 49 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದೇ ವೇಳೆ ಹೊನ್ನಾವರ 9, ಭಟ್ಕಳ 5, ಶಿರಸಿ 23,ಕಾರವಾರ 10, ಅಂಕೋಲಾ 8, ಕುಮಟಾ 7, ಯಲ್ಲಾಪುರ 8, ಮುಂಡಗೋಡ 9 ಮಂದಿ ಕೋವಿಡ್ ಗೆದ್ದು ಮನೆಗೆ ಮರಳಿದ್ದಾರೆ.
ಅಂಕೋಲಾದಲ್ಲಿ 12 ಹೊಸ ಪಾಸಿಟಿವ್ ಕೇಸ್. ಅಂಕೋಲಾ ಅ 21: ತಾಲೂಕಿನಲ್ಲಿ ಶನಿವಾರ 12 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.ಸೋಂಕು ಮುಕ್ತರಾದ 8 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 63 ಕ್ಕೆ ಏರಿಕೆಯಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ 24ಸೋಂಕಿತರು9 ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 39 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ 3568 ಸೋಂಕು ಪ್ರಕರಣಗಳು ವರದಿಯಾಗಿದ್ದು , ಇಂದಿನವರೆಗೆ ಒಟ್ಟೂ 71 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.
ತಾಲೂಕಿನ ವಿವಿಧೆಡೆ ಇಂದು ಒಟ್ಟೂ 1658 ಡೋಸ್ ಲಸಿಕೆ ನೀಡಲಾಗಿದೆ. ನಾಳೆ ದಿನಾಂಕ 22 ರ ರವಿವಾರ ತಾಲೂಕಿನ ಯಾವುದೇ ಭಾಗಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಇರುವುದಿಲ್ಲವೆಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಪ್ರಮುಖ ಸುದ್ದಿಗಳು: ಇದನ್ನೂ ಓದಿ
- ಪ್ರವಾಸಕ್ಕೆ ಬಂದಿದ್ದ ವೇಳೆ ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿ ಸಾವು
- ಕೆಲಸಕ್ಕೆ ಹೋದ ಯುವತಿ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ
- ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ನಿಂತು ಹೋದ ಯಂತ್ರಗಳ ಸದ್ದು ! ಅರ್ಜುನನ ತೆಗೆದೊಡನೆ ನಿರ್ಜನವಾಯಿತೇ ಪ್ರದೇಶ ?
- ಮನೆ ಸಮೀಪ ಕಾಣಿಸಿಕೊಂಡ ಬೃಹತ್ ಕಾಳಿಂಗ ಸರ್ಪ: ಯಶಸ್ವಿ ಕಾರ್ಯಾಚರಣೆ
- ಗಮನ ಸೆಳೆದ ಕಸದಿಂದ ರಸ ಮಾದರಿ ಕಲಾಕೃತಿ ತಯಾರಿಕೆ : ಗಮನ ಸೆಳೆಯುತ್ತಿರುವ ಗೋಡೆ ಬರಹ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.