Follow Us On

WhatsApp Group
Important
Trending

40 ಸಾವಿರಕ್ಕೂ ಅಧಿಕ ವ್ಯಾಕ್ಸಿನ್ ನಾಳೆ ಉತ್ತರಕನ್ನಡದಲ್ಲಿ ಲಭ್ಯ: ಎಲ್ಲೆಲ್ಲಿ ಎಷ್ಟು ವ್ಯಾಕ್ಸಿನ್ ಲಭ್ಯವಿದೆ ನೋಡಿ?

ಕಾರವಾರ: ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಒಂದೇ ಪರಿಹಾರವಾಗಿದ್ದು, ಹೀಗಾಗಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಗೆ ವೇಗ ನೀಡಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಭಾರೀ ಪ್ರಮಾಣದ ಕೋವಿಡ್ ಲಸಿಕೆ ಲಭ್ಯವಿದೆ. ಕೋವಿಶೀಲ್ಡ್ 35 ,300 ಮತ್ತು ಕೋವ್ಯಾಕ್ಸಿನ್ 4,900 ಸೇರಿ ಒಟ್ಟು 40,200 ಲಸಿಕೆ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ©Copyright reserved by Vismaya tv

ಕೋವಿಶೀಲ್ಡ್ ಎಲ್ಲೆಲ್ಲಿ ಲಭ್ಯ?

ಅಂಕೋಲಾದಲ್ಲಿ 2,500, ಭಟ್ಕಳ 5 ಸಾವಿರ, ಹಳಿಯಾಳ 2 ಸಾವಿರ, ಹೊನ್ನಾವರ 4 ಸಾವಿರ, ಜೋಯ್ಡಾ 1,500, ಕಾರವಾರ 2,700, ಮುಂಡಗೋಡ 4 ಸಾವಿರ , ಕುಮಟಾ 3 ಸಾವಿರ, ಶಿರಸಿ 5 ಸಾವಿರ, ಸಿದ್ದಾಪುರ 2 ಸಾವಿರ, ಯಲ್ಲಾಪುರ 1,500, ದಾಂಡೇಲಿ 1,500, ಜಿಲ್ಲಾಸ್ಪತ್ರೆಯಲ್ಲಿ 600 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ©Copyright reserved by Vismaya tv

ಕೋವ್ಯಾಕ್ಸಿನ್ ಎಲ್ಲೆಲ್ಲಿ ಲಭ್ಯ?

ಹೊನ್ನಾವರದಲ್ಲಿ 1 ಸಾವಿರ, ಕುಮಟಾ 1 ಸಾವಿರ, ಶಿರಸಿ 2,200, ದಾಂಡೇಲಿ 500, ಜಿಲ್ಲಾಸ್ಪತ್ರೆಯಲ್ಲಿ 200 ಸೇರಿ ಒಟ್ಟು 4,900 ಕೋವ್ಯಾಕ್ಸಿನ್ ಲಭ್ಯವಿದೆ. ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ.

ಅಂಕೋಲಾದಲ್ಲಿ 2500 ಡೋಸ್ ಲಸಿಕೆಗಳು ಲಭ್ಯ                                     

ಅಂಕೋಲಾ ಅ 22: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ  ಅಗಸ್ಟ್ 23 ರ ಸೋಮವಾರ  ಒಟ್ಟೂ 2500 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ  ಕೈಗೊಂಡಿದೆ.  ಹಟ್ಟಿಕೇರಿ ಪ್ರಾ. ಆ . ಕೇಂದ್ರ ವ್ಯಾಪ್ತಿಯ ಬೆಲೇಕೇರಿ 400, ಶಿರಕುಳಿ 200, ಬೆಳಸೆ ಪ್ರಾ ಆ ಕೇಂದ್ರ ವ್ಯಾಪ್ತಿಯ ಅಗ್ರಗೋಣ 570, ಹಿಲ್ಲೂರು ಪ್ರಾ. ಆ .ಕೇಂದ್ರ ವ್ಯಾಪ್ತಿಯಲ್ಲಿ 450, ರಾಮನಗುಳಿ ಪ್ರಾ. ಆ ವ್ಯಾಪ್ತಿಯ ಡೋಂಗ್ರಿ 220, ಆಗಸೂರು 230,ಹಾರವಾಡಾ ಪ್ರಾ ಆ ಕೇಂದ್ರ ವ್ಯಾಪ್ತಿಯ ಅಸರ್ವಾ 200, ಸಕಲಬೇಣ 230 ಡೋಸ್   ಲಸಿಕೆಗಳು ಲಭ್ಯವಿದ್ದು, ಅವುಗಳಲ್ಲಿ ಪ್ರಥಮ ಡೋಸ್  ಹಾಗೂ ,ದ್ವಿತೀಯ ಡೋಸ್ ಗಳನ್ನು ಸಮಾನವಾಗಿ ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳು ಕಾಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ .                                  ‘                       

ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button