Important
Trending

ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ 40 ಸಾವಿರಕ್ಕೂ ಅಧಿಕ ಲಸಿಕೆ ಲಭ್ಯ: ಎಲ್ಲೆಲ್ಲಿ ಎಷ್ಟು ಡೋಸ್ ವ್ಯಾಕ್ಸಿನ್ ಇದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 42,200 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಅಂಕೋಲಾದಲ್ಲಿ 2,500, ಭಟ್ಕಳ 4 ಸಾವಿರ, ಹಳಿಯಾಳ 2 ಸಾವಿರ, ಹೊನ್ನಾವರ 5,600, ಜೋಯ್ಡಾ 2 ಸಾವಿರ, ಕಾರವಾರ 1,200, ಮುಂಡಗೋಡ 4 ಸಾವಿರ, ಕುಮಟಾ 5,600, ಶಿರಸಿ 7 ಸಾವಿರ, ಸಿದ್ದಾಪುರ 3,500, ಯಲ್ಲಾಪುರ 2,500, ದಾಂಡೇಲಿ 1,400, ನೇವಿ 300 ಮತ್ತು ಜಿಲ್ಲಾಸ್ಪತ್ರೆಯಲ್ಲಿ 600 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.©Copyright reserved by Vismaya tv

ಅಂಕೋಲಾದಲ್ಲಿ ಎಲ್ಲೆಲ್ಲಿ?                                        

ಅಂಕೋಲಾ ಅ 25: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ  ಅಗಸ್ಟ್ 26 ರ ಸ  ಗುರುವಾರ  ಒಟ್ಟೂ 2500 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ  ಕೈಗೊಂಡಿದೆ.  ವಾಡಿಬೊಗ್ರಿ (350), ಶಿರೂರು (220), ಅಗಸೂರು (200), ರಾಮನಗಳಿ (250),  ಬೃಹ್ಮೂರು (450),ಕಸಭಾ ಕೇಣಿ (300) ಹಾರವಾಡ (430)  ವ್ಯಾಪ್ತಿಯಲ್ಲಿ  ನಾಳೆ, ಗುರುವಾರ ಲಸಿಕಾಕರಣ ನಡೆಯಲಿದೆ.  ©Copyright reserved by Vismaya tv

ಅವುಗಳಲ್ಲಿ ಪ್ರಥಮ ಡೋಸ್  ಹಾಗೂ ,ದ್ವಿತೀಯ ಡೋಸ್ ಗಳ ಹೊರತಾಗಿ ವಿಕಲಚೇತನರರು , ಗರ್ಭಿಣಿಯರು ಹಾಗೂ  ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕೆಂದು ಕೋರಲಾಗಿದೆ. ಅಲ್ಲದೆ, ಹೆಚ್ಚಿನ ಮಾಹಿತಿಗಾಗಿ ತಮ್ಮ ತಮ್ಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯಕೇಂದ್ರವನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button