ಲಾಡ್ಜ್ ಒಂದರ ಎದುರು ನಿಲ್ಲಿಸಿದ್ದ ಪ್ರವಾಸಿಗರೊಬ್ಬರ ದುಬಾರಿ ಬೈಕ್ ಕಳ್ಳತನ ಪ್ರಕರಣ: ಆರೋಪಿಯನ್ನು ಬಂಧಿಸಿದ ಕುಮಟಾ ಪೊಲೀಸರು

ಕುಮಟಾ : ಕುಮಟಾ ತಾಲೂಕಿನ ಲಾಡ್ಜ್ ಒಂದರ ಎದುರು ನಿಲ್ಲಿಸಿದ್ದ ಪ್ರವಾಸಿಗರೊಬ್ಬರ ದುಬಾರಿ ಬೈಕ್ ಬೆಳಗಾಗುವುದರೊಳಗೆ ಮಾಯವಾಗಿತ್ತು.ಇದೀಗ ಕುಮಟಾ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳತನ ಮಾಡಿದ ಆರೋಪಿಯನ್ನು ಕಾರವಾರ ಶಿರವಾಡದ ಆನಂದ (19 ವರ್ಷ) ಎಂದು ತಿಳಿದುಬಂದಿದೆ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.
ಬೆಂಗಳೂರಿನಿಂದ ಪ್ರವಾಸಕ್ಕೆ ಹೊರಟ ಯುವಕರ ತಂಡ ಬೈಕ್ ನಲ್ಲಿ ಕೇರಳವನ್ನೆಲ್ಲಾ ಸುತ್ತಾಡಿ ಗೋಕರ್ಣಕ್ಕೆ ತೆರಳುವ ಉದ್ದೇಶದೊಂದಿಗೆ ಕುಮಟಾಕ್ಕೆ ಆಗಮಿಸಿ, ಇಲ್ಲಿನ ಲಾಡ್ಜ್ ನಲ್ಲಿ ತಂಗಿದ್ದರು. ಆದರೆ ರಾತ್ರಿರೋತ್ರಿ ತಾಲೂಕಿನ ಲಾಡ್ಜ್ ನಿಲ್ಲಿಸಿದ್ದ ಈ ದುಬಾರಿ ಬೈಕ್ ಕಳ್ಳತನವಾಗಿತ್ತು.
ಈ ಕಳ್ಳತನ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕುಮಟಾ ಠಾಣೆಯ ಪಿ.ಎಸ್.ಐ ರವರುಗಳಾದ
ಆನಂದಮೂರ್ತಿ, ರವಿ ಗುಡ್ಡಿ, ಚಂದ್ರಮತಿ ಪಟಗಾರ ಹಾಗೂ ಸಿಬ್ಬಂದಿಯವರಾದ ಸಿಹೆಚ್‌ಸಿ-
ದಯಾನಂದ ನಾಯ್ಕ, ಸಿಹೆಚ್‌ಸಿ ಗಣೇಶ ನಾಯ್ಕ, ಸಿಪಿಸಿ- ಸಂತೋಷ ಬಾಳೇರ, ಸಿಪಿಸಿ- ಕೃಷ್ಣ ಎನ್, ಜೆ, ಸಿಪಿಸಿ- ಬಸವರಾಜ ಜಾಡರ, ಮಾರುತಿ ಗಾಳಪೂಜಿ, ಇವರುಗಳ ತಂಡ ಪ್ರಮುಖ ಪಾತ್ರ ವಹಿಸಿದೆ.
ವಿಸ್ಮಯ ನ್ಯೂಸ್ ಕುಮಟಾ
ಇದನ್ನೂ ಓದಿ : ಪ್ರಮುಖ ಸುದ್ದಿಗಳು
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ
- ಭಟ್ಕಳದ ಬೈಲೂರಿನಲ್ಲಿ ವಾತ್ಸಲ್ಯ ಮನೆ ಹಸ್ತಾಂತರ: ಸಂಸ್ಥೆಯ ಸಮಾಜಮುಖಿ ಕೆಲಸಕ್ಕೆ ಮೆಚ್ಚುಗೆ
- ಬೇಸಿಗೆ ರಜೆ ನಿಮಿತ್ತ 20 ದಿನಗಳ ಸಂಗೀತ ಸಂಸ್ಕಾರ ಶಿಬಿರ