
ಹೊನ್ನಾವರ: ಕೆಲವು ದಿನಗಳ ಹಿಂದೆ ಗುಣವಂತೆ ಮಂಕಿ ಭಾಗದಲ್ಲಿ ಬೆಳ್ಳಂಬೆಳಿಗ್ಗೆ ಐಷಾರಾಮಿ ಕಾರಿನಲ್ಲಿ ಬಂದು ರಸ್ತೆಯ ಪಕ್ಕದಲ್ಲಿ ಮಲಗಿದ್ದ ಗೋವುಗಳನ್ನು ಕದ್ದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊನ್ನಾವರ ತಾಲೂಕಿನ ಮಂಕಿ ಮಾವಿನಕಟ್ಟಾ ಮತ್ತು ಗುಣವಂತೆ ಭಾಗದಲ್ಲಿ ಕಾರಿನಲ್ಲಿ ಗೋವುಗಳನ್ನು ತುಂಬಿಕೊoಡು ಹೋಗುತ್ತಿರುವ ದೃಶ್ಯ ಸಿ ಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ಶಾಸಕರು ಕೂಡಾ ಆರೋಪಿಗಳನ್ನು ಆದಷ್ಟು ಶೀಘ್ರವಾಗಿ ಬಂಧಿಸುವoತೆ ಪೊಲೀಸರು ಸೂಚಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದು, ಸಿಸಿಟಿವಿಯಲ್ಲಿ ದೊರೆತ ಮಾಹಿತಿ ಆಧರಿಸಿ, ಎರಡನೇ ದಿನದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. 10 ಜನ ಆರೋಪಿಗಳಲ್ಲಿ 7 ಜನರನ್ನು ಬಂಧಿಸಿದ್ದು, ಇನ್ನು ಮೂವರಿಗೆ ಹುಡುಕಾಟ ನಡೆದಿದೆ. ಆರೋಪಿಗಳು ಕಳತನಕ್ಕೆ ಬಳಸುತಿದ್ದ ಎರಡು ವಾಹನ ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಲಾಗಿದೆ.
ವಾಜೀದ ಜಾಪರ ವಾಟಿ, ಮೂಲಾರ, ಎಸ್.ಎಸ್ ನರ್ಸರಿರಸ್ತೆ, ಕಾನೂ, ಉಡುಪಿ ಜಿಲ್ಲೆ,ಸಯ್ಯದ್ ಮುಸ್ಸಾ ಸಯ್ಯದ್ ಅಹಮ್ಮದ, ಹನಿಫಾಬಾದ, ತಲಹಾ ಕಾಲೋನಿ, ಹೆಬಳೆ, ಭಟ್ಕಳ, ದೃಶ್ಯ ದಿನೇಶ ಮೆಂಡನ್, ಕಟಪಾಡಿ, ಉಡುಪಿ,ವಣವ ತಂದೆ ರಾಜಶೇಖರ ಶೆಟ್ಟಿ, ಕೆರನಕಾರಪಾಡಿ, ಉಡುಪಿ,ಮಹಮ್ಮದ ಫಯಾಜ್ ಮಹಮ್ಮದ್. ಮನ್ಸೂಮ್ ಕಾಲೋನಿ, ಭಟ್ಕಳ, ಮಹಮ್ಮದ ಇಬ್ರಾಹಿಂ ಮಹಮ್ಮದ .ಹುಸೇನ ಹವಾ, ಸಿದ್ದಿಕ್ ಸ್ಟ್ರೀಟ್ ಭಟ್ಕಳ, ನರತಂದೆ ಜಾಯಿರಿ ಹುಸೇನ, ಉಡುಪಿ ಇವರನ್ನು ಬಂದಧಿಸಲಾಗಿದೆ.
ಅಜುರುದ್ದಿನ ತಂದೆ ಜಪ್ತಾಲ ಖಾದರ್, ಕಾಪು, ಉಡುಪಿ,(ನಾಪತ್ತೆ)ಆಶಿಕ ಸಂಶುದ್ದಿನ ಮಲ್ಲರ್, ಕಾಪು, ಉಡುಪಿ.(ನಾಪತ್ತೆ)ನೂರಿನ ಗೈಮಾ, ನವಾಯಕೇರಿ, ಮಾವಳ್ಳಿ-1, ಮುರ್ಡೆಶ್ವರ, ಭಟ್ಕಳ. (ನಾಪತ್ತೆ)ಯಾಗಿದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ವಿದ್ಯಾರ್ಥಿಗಳಿಗೆ ಭಗವದ್ಗೀತೆ ನೀಡಿ ಭವಿಷ್ಯಕ್ಕೆ ಶುಭ ಕೋರಿದ ಪ್ರಮುಖ ಸೌಹಾರ್ದ ಸಹಕಾರಿ
- ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ಈಗಿನಿಂದಲೇ ಸಮಯಕ್ಕೆ ಮಹತ್ವ ನೀಡಿ : ಡಾ. ಗಣೇಶ ನಾಗ್ವೇಕರ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸಮ್ಮೇಳನ
- ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್ಫೀಲ್ಡ್ ಬಂದರಿನ ಅಭಿವೃದ್ಧಿ
- ವಿದ್ಯಾರ್ಥಿ ಸಂಸತ್ ಉದ್ಘಾಟನೆ ಹಾಗೂ ಬರಹ ಪಠ್ಯ ವಿತರಣೆ
- ಕಲಿಕಾ ಸಾಮಗ್ರಿ ವಿತರಣೆ ನೆಪದಲ್ಲಿ ನೆರವು ನೀಡುವುದು ಬೇಡವೇ ಬೇಡ : JSW ಕಂಪನಿ ವಿರುದ್ಧ ಮತ್ತೆ ಸ್ಥಳೀಯ ಮೀನುಗಾರರ ಆಕ್ರೋಶ