Follow Us On

WhatsApp Group
Big News
Trending

ಅಂತರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆ: ಮನಸೂರೆಗೊಳ್ಳುತ್ತಿದೆ ಫೋಟೋ: ಬಹುಮಾನ ಗೆದ್ದ ಉತ್ತರಕನ್ನಡದ ಹುಡುಗ

ಕಾರವಾರ: ಪಿಂಡಲ್ ಎಂಬ ಸೋಶಿಯಲ್ ಫೊಟೊಗ್ರಫಿ ಆ್ಯಪ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಫೊಟೊಗ್ರಫಿ ಬಹುಮಾನಕ್ಕೆ ಭಾರತದ ಏಳು ಮಂದಿ ಅಂತರರಾಷ್ಟ್ರೀಯ ಫೊಟೊಗ್ರಾಪರ್ಸ್ ಆಯ್ಕೆಯಾಗಿದ್ದು ಅದರಲ್ಲೋರ್ವ ಅಂಕೋಲಾ ಮೂಲದ ಯುವಕ ಸೇರಿದ್ದಾನೆ. ಪಿಂಡಲ್ ಎಂಬ ಸೋಶಿಯಲ್ ಫೊಟೊಗ್ರಫಿ ಆ್ಯಪ್ #ಫಿಂಡಲ್ಜೆಮ್ ಹ್ಯಾಶ್ ಟ್ಯಾಗ್ ನಡಿ ಜೂನ್ ನಿಂದ ಆಗಸ್ಟ್ 15ರವರೆಗೆ ಸ್ಪರ್ಧೆ ಆಯೋಜಿಸಿತ್ತು.

ನಿಸರ್ಗ, ಸಂಸ್ಕೃತಿ, ಫುಡ್ & ಡ್ರಿಂಕ್, ಫ್ರೀ ಟೈಮ್ ಫೊಟೊಗ್ರಫಿ, ಸಾಕುಪ್ರಾಣಿಗಳು ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದಕ್ಕೆ ಒಟ್ಟಾರೆ 5000 ಡಾಲರ್ ಪ್ರೈಸ್ ಘೋಷಿಸಲಾಗಿತ್ತು. #PINDLEGEM ಹ್ಯಾಶ್ ಟ್ಯಾಗ್ ನಡಿ ಮೂರು ತಿಂಗಳುಗಳ ಕಾಲ ಫೊಟೊಗಳನ್ನು ಕಳುಹಿಸಲು ಅವಕಾಶ ನೀಡಲಾಗಿತ್ತು.

ವಿಶ್ವದ ವಿವಿಧೆಡೆಯಿಂದ ನಾಲ್ಕು ಸಾವಿರ ಸ್ಪರ್ಧಾಳುಗಳು ಭಾಗವಹಿಸಿದ್ದರು. ಅಂತಿಮವಾಗಿ ಬುಧವಾರ ಸ್ಪರ್ಧೆಯ ಫಲಿತಾಂಶ ಘೋಷಿಸಲಾಗಿದ್ದು, 50 ವಿಜೇತರನ್ನು ಆಯ್ಕೆ ಮಾಡಲಾಗಿದೆ. ಜಗತ್ತಿನ 20 ತೀರ್ಪುಗಾರರು ಫೊಟೊಗಳಲ್ಲಿ ಅತ್ಯುತ್ತಮವಾದದನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಏಳು ಮಂದಿ ಭಾರತೀಯರಾದ ಪ್ರಮೋದ್ ಗೌಡ, ಶಿಬಾಸಿಶ್ ಶಾಹ್, ಅವ್ರಾ ಘೋಷ್, ಅನಿರ್ಬನ್ ಪಾನ್, ಅರುಣ್ ಶಾಹ್, ಬರ್ಶಾ ಹಮಾಲ್, ಪ್ರಿಯಾಂಕಾ ಸಹಾನಿ ಸೇರಿದ್ದಾರೆ.

ಪ್ರಮೋದ್ ಗೌಡ ಪೊಟೋಗ್ರಫಿಗೆ ಸಿಕ್ಕ ಮನ್ನಣೆಇನ್ನು ಭಾರತೀಯರಲ್ಲಿ ವಿಜೇತರಾದವರ ಪೈಕಿ ಪ್ರಮೋದ್ ಗೌಡ ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಬೆಳಸೆಯವರು. ಇವರು ಐಟಿ ಎಂಜಿನಿಯರ್ ಆಗಿದ್ದು, ಫೊಟೊಗ್ರಫಿ ಇವರ ಹಸ್ಯಾಸವಾಗಿದೆ. ಕರಾವಳಿ ಭಾಗದ ದೈನಂದಿನ ಬದುಕು, ಕಡಲು ಹಾಗೂ ಪ್ರಕೃತಿ ಸೊಬಗಿನಲ್ಲಿ ತೆಗೆದ ಪೋಟೊಗಳನ್ನು ಸ್ಪರ್ಧೆಗೆ ಕಳುಹಿಸಿದ್ದರು. ಪೋಟೊಗಳು ಇದೀಗ ಆಯ್ಕೆಯಾಗಿದ್ದು, ಅವರಿಗೆ ಚಿನ್ನದ ಪದಕ ಹಾಗೂ 100 ಡಾಲರ್ ಬಹುಮಾನವನ್ನು ಪಿಂಡಲ್ ಘೋಷಿಸಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button