Important
Trending

ಅಪ್ರಾಪ್ತ ಬಾಲಕನೊಂದಿಗೆ ಬಲವಂತವಾಗಿ ಸಲಿಂಗ ಲೈಂಗಿಕ ಕ್ರಿಯೆ ಮಾಡಿದ ಆರೋಪ ಸಾಬೀತು: ವ್ಯಕ್ತಿಗೆ 20 ವರ್ಷಗಳ ಕಠಿಣ ಶಿಕ್ಷೆ

ಕುಮಟಾ: ಅಪ್ರಾಪ್ತ ಬಾಲಕನೊಂದಿಗೆ ಬಲವಂತವಾಗಿ ಸಲಿಂಗ ಲೈಂಗಿಕ ಕ್ರಿಯೆ ಮಾಡಿದ ಆರೋಪಿಗೆ ಜಿಲ್ಲಾ ಸತ್ರ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪಟ್ಟಣದ ವನ್ನಳ್ಳಿಯ ಅನ್ಸಾರಿ ಖಾಸಿಂ ಜಿಂಗ್ರೊ ಎಂಬಾತ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಆರೋಪಿ 2022ರ ಮಾರ್ಚ್ 15ರಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ 6 ವರ್ಷದ ಬಾಲಕನನ್ನು ಚಾಕಲೇಟ್ ನೀಡುವುದಾಗಿ ಪುಸಲಾಯಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಲಿಂಗ ಲೈಂಗಿಕ ಕ್ರಿಯೆ ನಡೆಸಿದ್ದ ಎಂಬ ಆರೋಪ ಕೇಳಿಬಂದಿತ್ತು.

ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಇಬ್ಬರು ಆರೋಪಿಗಳ ಬಂಧನ

ಈ ಸಂಬoಧ ನೊಂದ ಬಾಲಕನ ಪಾಲಕರು ಮಾರ್ಚ್ 16ರಂದು ಆರೋಪಿತನ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button