Follow Us On

WhatsApp Group
Important
Trending

ಬೈಕ್ ಕದ್ದವನನ್ನು 24 ತಾಸಿನಲ್ಲಿ ವಶಕ್ಕೆ ಪಡೆದ ಪೊಲೀಸರು | 22 ರ ಪೋರನ ಮೇಲೆ ದಾಖಲಾಗಿದೆಯಂತೆ ಒಟ್ಟೂ 21 ಕೇಸ್!

ಅಂಕೋಲಾ: ಮೋಟಾರ್ ಸೈಕಲ್ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ತನಿಖೆ ಕೈಗೊಂಡ ಪೋಲೀಸರು ಪ್ರಕರಣ ದಾಖಲಾದ 24 ಘಂಟೆಯೊಳೆಗೆ, ಆರೋಪಿಯನ್ನು ದಸ್ತಗಿರಿ ಮಾಡಿ, ಕಳ್ಳತನ ಮಾಡಿದ ಮೋಟರ್ ಸೈಕಲ್ ವಶಪಡಿಸಿಕೊಂಡು ಕಾನೂನು ಕ್ರಮ ಮುಂದು ವರೆಸಿದ್ದಾರೆ.

ಅಪ್ರಾಪ್ತ ಬಾಲಕನೊಂದಿಗೆ ಬಲವಂತವಾಗಿ ಸಲಿಂಗ ಲೈಂಗಿಕ ಕ್ರಿಯೆ ಮಾಡಿದ ಆರೋಪ ಸಾಬೀತು: ವ್ಯಕ್ತಿಗೆ 20 ವರ್ಷಗಳ ಕಠಿಣ ಶಿಕ್ಷೆ

ಉತ್ತರ ಪ್ರದೇಶ ಮೂಲದ, ಟೈಲ್ಸ್ ಕೆಲಸಗಾರ, ಹಾಲಿ ಅಂಕೋಲಾ ತಾಲೂಕಿನ ಬೊಬ್ರುವಾಡಾ ಮುಖ್ಯ ರಸ್ತೆ ಅಂಚಿಗೆ (ಪಿ.ಎಂ ಪ್ರೌಢ ಶಾಲೆ ಹತ್ತಿರ ) ಬಾಡಿಗೆ ಮನೆಯಲ್ಲಿ ವಾಸವಾಗಿದ್ದ, ಸೋನು ಪ್ರಜಾಪತಿ ತಂದೆ ರಾಮಪ್ರಸಾದ ಪ್ರಜಾಪತಿ (27) ತನ್ನ ಮನೆ ಮುಂದೆ ನಿಲ್ಲಿಸಿಟ್ಟ ತನ್ನ (KA 30 L 5017) ಹೀರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿ ಕೊಂಡು ಹೋದ ಬಗ್ಗೆ ಅಂಕೋಲಾ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, 24 ಘಂಟೆಯೊಳಗಡೆ ಆರೋಪಿತರನ್ನು ವಶಕ್ಕೆ ಪಡೆದು, ಅವರಿಂದ ಕಳ್ಳತನ ಮಾಡಿಕೊಂಡು ಹೋದ ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ. ಸಿಪಿಐ ಸಂಕೋಷ ಶೆಟ್ಟಿ ಮಾರ್ಗದರ್ಶನದಲ್ಲಿ, ಪಿ ಎಸೈ ಮಹಾಂತೇಶ ಬಿ.ವಿ, ಸಿಬ್ಬಂದಿಗಳಾದ ಪರಮೇಶ ಎಸ್, ಕಿರಣ ನಾಯ್ಕ, ಶ್ರೀಕಾಂತ ಕಟಬರ, ಪುನೀತ್ ನಾಯ್ಕ, ಸಲೀಂ ಮೊಕಾಶಿ ಅವರನ್ನೊಳಗೊಂಡ ತಂಡ ಯಶಸ್ವೀ ಕಾರ್ಯಚರಣೆ ನಡೆಸಿದ್ದು, ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಈ ಪತ್ತೆ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ನೂತನ ಎಸ್ಪಿ ,ವಿಷ್ಣುವರ್ಧನ್ ಎನ್, ಡಿ ವೈ ಎಸ್ಪಿ ವೆಲೈಂಟೈನ್ ಡಿಸೋಜಾರವರು ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೈಕ್ ಕಳ್ಳತನದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಶಾಂತ್ ಕೆ.ನಾಯ್ಕ (22) ಎನ್ನುವವ ಆರೋಪಿಯಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ಈ ಹಿಂದೆಯೂ ಅಂಕೋಲಾ ತಾಲೂಕಿನ 12 ಕ್ಕೂ ಹೆಚ್ಚು ಕೇಸ್ ಗಳಲ್ಲಿ ಹಾಗೂ ಜಿಲ್ಲೆಯ ಕಾರವಾರ (2), ಗೋಕರ್ಣ (05), ಹೊನ್ನಾವರ (01) ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿ, ಹಲವು ಬಾರಿ ಜೈಲು ಸೇರಿ, ಜಾಮೀನಿನ ಮೇಲೆ ಬಿಡುಗಡೆಗೊಂಡು ಬಂದಿದ್ದು, ಈ ಪ್ರಕರಣದ ಮೂಲಕ ಮತ್ತೆ ಜೈಲು ಸೇರುವಂತಾಗಿದೆ.

ಈತನ ಮೇಲಿರುವ ಪೋಕ್ಸೋ ಪ್ರಕರಣ ಮತ್ತಿತರ ಕಳ್ಳತನದ ಅನೇಕ ಆರೋಪಗಳಿಗೆ ಸಂಬಂಧಿಸಿದಂತೆ ಅನೇಕ ಕೇಸಗಳು ಈಗಲೂ ವಿಚಾರಣೆ ಹಂತದಲ್ಲಿದ್ದು , ಈತನ ದುರ್ನಡತೆಯಿಂದ ಕುಟುಂಬಸ್ಥರು , ಆಪ್ತರು , ಊರಿನ ಅನೇಕರು ಬೇಸತ್ತು ಹೋಗಿದ್ದಾರೆ ಎನ್ನಲಾಗಿದೆ. ಸಂಗತಿ ಸಂಗ ದೋಷ ಎಂಬಂತೆ ಮೋಟರ್ ಸೈಕಲ್ ಕಳ್ಳತನದ ಪ್ರಕರಣದಲ್ಲಿ ಮತ್ತಿಬ್ಬರು ಬಾಲಕರ ಹೆಸರು ಕೇಳಿ ಬಂದಿದ್ದು, (18 ವಯೋಮಿತಿ ದಾಟದ ಕಾರಣ) ಕಾನೂನಿನ ಶಿಕ್ಷೆಯಿಂದ ಪಾರಾಗುವಂತಾಗಿದೆ ಎಂಬ ಮಾತು ಕೇಳಿಬಂದಿದೆ.

ಆದರೆ ಪ್ರಶಾಂತ್ ನಾಯ್ಕ ಎನ್ನುವ ಆರೋಪಿ ವಯಸ್ಸು 22 ವರ್ಷ ವಾಗುವಷ್ಟರಲ್ಲಿಯೇ ತನ್ನ ಖತರ್ನಾಕ್ ಬುದ್ಧಿಯಿಂದ ಈ ಪ್ರಕರಣವೂ ಸೇರಿ ಜಿಲ್ಲೆಯ ವಿವಿಧೆಡೆ ಸೇರಿ ಒಟ್ಟೂ 20 ಕ್ಕೂ ಹೆಚ್ಚು ಕೇಸಗಳಲ್ಲಿ ಆರೋಪಿ ಯಾಗಿದ್ದರೂ,ಯಾವುದಕ್ಕೂ ಹೇಸದೇ, ಅಂಜದೇ ತನ್ನ ಕೆಟ್ಟ ಚಾಳಿ ಮುಂದುವರೆಸಿದಂತಿದೆ. ಮೋಜು ಮಸ್ತಿ, ಕೆಟ್ಟ ವ್ಯಸನಕ್ಕೆ ಬಲಿ ಬೀಳುತ್ತಿರುವ, ಇನ್ನಿತರೇ ಕಾರಣಗಳಿಂದ ದಾರಿತಪ್ಪುತ್ತಿರುವ ಹದಿಹರೆಯದ ಯುವಕರು , ಅರಿವಿದ್ದೋ ಇಲ್ಲದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಮಕ್ಕಳು ಹಾದಿ ತಪ್ಪದಂತೆ ಪಾಲಕರು ಮತ್ತು ಸಮಾಜ ಕಾಳಜಿ ಮತ್ತು ಎಚ್ಚರಿಕೆ ವಹಿಸಬೇಕಿದೆ ಎಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button