Follow Us On

WhatsApp Group
Focus News
Trending

ಮಂಜುಗುಣಿಯ ಶ್ರೀ ವೆಂಕಟರಮಣ ದೇವಾಲಯದಲ್ಲಿ ಶ್ರೀ ಹರಿಪಾದಾರ್ಪಣೆ ಕಾರ್ಯಕ್ರಮ: ಡಿಸೆಂಬರ್ 2, 11 ರಂದು ಆಯೋಜನೆ

ಶಿರಸಿ: ಕರ್ನಾಟಕ ತಿರುಪತಿ ಎಂದೇ ಪ್ರಸಿದ್ಧವಾದ ಮಂಜುಗುಣಿಯ ಶ್ರೀ ವೆಂಕಟರಮಣ ದೇವಾಲಯದಲ್ಲಿ ಭೂ ದಾನ ಅಭಿಯಾನದ ಶ್ರೀ ಹರಿ ಪಾದಾರ್ಪಣೆ ಕಾರ್ಯಕ್ರಮ ಡಿಸೆಂಬರ್ 3 ಹಾಗೂ 11ರಂದು ಎರಡು ದಿನಗಳ ಕಾಲ ನಡೆಯಲಿದೆ. ಈ ಕುರಿತು ದೇವಸ್ಥಾನದಲ್ಲಿ ಸುದ್ದಿಗೋಷ್ಟೀ ನಡೆಸಿದ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಮಂಜುಗುಣಿ ಮಾತನಾಡಿ, ಮಂಜುಗುಣಿ ಕ್ಷೇತ್ರದಲ್ಲಿಯೇ ಹತ್ತು ಎಕರೆ ಭೂಮಿ ಖರೀದಿಗೆ ಮುಂದಾಗಿದ್ದೇವೆ.ಅದರ ಭಾಗವಾಗಿ ಭಕ್ತ ಕೋಟೆಯಲ್ಲಿ ವಿನಂತಿಸಿಕೊoಡಾಗ ಅದಕ್ಕೆ ಬೇಕಾದ ಹಣ ಸಂಗ್ರಹಣೆಯಾಗಿದೆ. ಈ ಹಿನ್ನಲೆಯಲ್ಲಿ ಡಿಸೆಂಬರ್ 3ರಂದು ಭೂ ವರಾಹ ಮಂತ್ರ ಹವನ ದಾನ ಸಂಕಲ್ಪ, ಭೂಪರಿಗ್ರಹ, ಭೂ ಪೂಜಾ ಹಾಗೂ ದಾನ ಪ್ರಕ್ರಿಯೆ ಹಾಗೂ 11ರಂದು ಧದಿವಾಮನ ಮಂತ್ರ ಹವನ ಸರ್ವಸಮರ್ಪಣೆ, ಭೂ ಪೂಜಾ ದಾನ ಪ್ರಕ್ರಿಯೆ ನಡೆಯಲಿದೆ. ಸರ್ವ ಸಮರ್ಪಣೆಯನ್ನು ವಿಜಯ ನಗರ ಅರಸು ವಶಂಸ್ಥ ಶ್ರೀಕೃಷ್ಣದೇವರಾಯರು ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು,

ಬೈಕ್‌ನ್ನು ನಿಲ್ಲಿಸಿ ಮೂತ್ರವಿಸರ್ಜನೆ ಮಾಡುತ್ತಿದ್ದ ವೇಳೆ ಡಿಕ್ಕಿ ಹೊಡೆದ ಕಂಟೇನರ್: ವ್ಯಕ್ತಿ ಸ್ಥಳದಲ್ಲೇ ಸಾವು

ಎರಡು ದಿನಗಳ ಕಾಲ ಶ್ರೀ ದೇವಸ್ಥಾನ ದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಕೀರ್ತನೆ, ಭರತನಾಟ್ಯ, ಯಕ್ಷಗಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಅನಂತ ರಾಮಕೃಷ್ಣ ಪೈ ,ಶ್ರೀರಾಮ ನರಸಿಂಹ ಹೆಗಡೆ,ಮಾಬ್ಲೇಶ್ವರ ಹೆಗಡೆ ಸೇರಿ ಹಲವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button