Follow Us On

WhatsApp Group
Focus News
Trending

ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಟ್ಕಳದ ನಾಗಶ್ರೀ ವಿ ನಾಯ್ಕಗೆ ಬೆಳ್ಳಿ ಹಾಗೂ ಕಂಚಿನ ಪದಕ

ಭಟ್ಕಳ: ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ತಂಡದಿoದ ಪ್ರತಿನಿಧಿಸಿದ ಭಟ್ಕಳದ ನಾಗಶ್ರೀ ವಿ ನಾಯ್ಕ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ.

ಕಳೆದ ಬಾರಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್, ಚಾಂಪಿಯನ್ ಶಿಪ್ ನಲ್ಲಿ ಭಟ್ಕಳದ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟಿನ ವಿದ್ಯಾರ್ಥಿನಿಯಾದ ನಾಗಶ್ರೀ ನಾಯ್ಕ ಚಿನ್ನದ ಪದಕ ಗೆದ್ದು ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದ್ದಳು.

ಆಗಸ್ಟ್ 26 ರಿಂದ 29ರ ತನಕ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾರತ ದೇಶದ ಎಲ್ಲಾ ರಾಜ್ಯದಿಂದ ಸುಮಾರು ನಾಲ್ಕು ಸಾವಿರ ಅಧಿಕ ಕಿಕ್ ಬಾಕ್ಸಿಂಗ್ ಪಟುಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ತಂಡದಿoದ ಪ್ರತಿನಿಧಿಸಿದ ಭಟ್ಕಳದ ನಾಗಶ್ರೀ ವಿ ನಾಯ್ಕ , ಪಾಯಿಂಟ್ ಫೈಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಪಡುಕೊಂಡಿದ್ದು , ಕ್ರಿಯೇಟಿವ್ ಫಾಮ್ ವೇಫನ್ ವಿಭಾಗದಲ್ಲಿ ಕಡಿಮೆ ಅಂತರದ ಪಾಯಿಂಟ್ ನಲ್ಲಿ ಸೋತು ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕ ಪಡೆದುಕೊಳ್ಳುವುದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಕೈ ತಪ್ಪಿದಂತಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button