Follow Us On

WhatsApp Group
Important
Trending

ಉತ್ತರಕನ್ನಡದಲ್ಲಿ ನಾಳೆ ಲಭ್ಯವಿರುವ ಲಸಿಕೆಯ ವಿವರ: ಎಲ್ಲೆಲ್ಲಿ ಎಷ್ಟು ಡೋಸ್ ವ್ಯಾಕ್ಸಿನ್ ಇದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 30,900 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಅಂಕೋಲಾ 3 ಸಾವಿರ, ಭಟ್ಕಳ 3,500, ಹಳಿಯಾಳ 4 ಸಾವಿರ, ಹೊನ್ನಾವರ 3,600 ಮತ್ತು ಜೋಯ್ಡಾದಲ್ಲಿ ಎರಡು ಸಾವಿರ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.

ಕುಮಟಾ 3,600, ಶಿರಸಿ 4 ಸಾವಿರ, ಸಿದ್ದಾಪುರ 3 ಸಾವಿರ, ಯಲ್ಲಾಪುರ 1,500, ದಾಂಡೇಲಿ ,500 ಮತ್ತು ಜಿಲ್ಲಾಸ್ಪತ್ರೆಯಲ್ಲಿ 700 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.

ಹೊನ್ನಾವರ ತಾಲೂಕಿನಲ್ಲಿ ಎಲ್ಲೆಲ್ಲಿ?

ಹೊನ್ನಾವರ ತಾಲ್ಲೂಕಿನಲ್ಲಿ ನಾಳೆ ಕೋವಿಶೀಲ್ಡ್ 3600 ಮತ್ತು ಕೋವ್ಯಾಕ್ಸಿನ್ 100 ಡೋಸ್ ಲಭ್ಯವಿದೆ.

ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಟ್ಟಡದಲ್ಲಿ ಮತ್ತು ಪಟ್ಟಣ ಪಂಚಾಯತ ಸಭಾಭವನದಲ್ಲಿ ಹಾಗೂ ತಾಲ್ಲೂಕಿನ ಕಡತೋಕಾ, ಹಳದಿಪುರ, ಸಾಲಕೋಡ, ಖರ್ವಾ, ಹೊಸಾಡ, ಗೇರುಸೋಪ್ಪಾ, ಶಂಶಿ, ಬಳ್ಕೂರ, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಳೆ ಕೋವಿಶೀಲ್ಡ್ 3600 ಡೋಸ್ ಮತ್ತು ಕೋವ್ಯಾಕ್ಸಿನ್ 100 ವಿತರಿಸಲಾಗುವುದು ಎಂದು ವಿಸ್ಮಯ ಟಿ.ವಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂಕೋಲಾದಲ್ಲಿ ಎಲ್ಲೆಲ್ಲಿ?

ಅಂಕೋಲಾ: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಅಗಸ್ಟ್ 31 ರ ಮಂಗಳವಾರ ಒಟ್ಟೂ 3000 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ಪುರ್ಲಕ್ಕಿಬೇಣ (400),. ಬೆಲೇಕೇರಿ (320) , ಬೆಳಸೆ (390), ಹೊನ್ನೆಬೈಲ್ (300), ಹೊಸೂರು (540), ಕೋಡ್ಸಣಿ (270), ಹಳವಳ್ಳಿ (150), ರಾಮನಗುಳಿ (120),ಹಾರವಾಡ (510) ವ್ಯಾಪ್ತಿಗಳಲ್ಲಿ ಲಸಿಕಾಕರಣ ನಡೆಯಲಿದೆ.

ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳು ಒಳಗೊಂಡಿದೆ. ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ವಿಲಾಸ ನಾಯಕ ಅಂಕೋಲಾ

Back to top button