Follow Us On

WhatsApp Group
Important
Trending

ಹತ್ತಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್ ? ಕದ್ದ ಮೊಬೈಲ್ ಮೂಲಕವೇ ಸಿಕ್ಕಿ ಬಿದ್ದರೇ ಕಳ್ಳರು?

ಅಂಕೋಲಾ: ಅಂಕೋಲಾ ಹಾಗೂ ಗೋಕರ್ಣ ಸುತ್ತಮುತ್ತಲ ಹತ್ತಾರು ಕಳ್ಳತನದಲ್ಲಿ ಭಾಗಿಯಾಗಿದ್ದರೆನ್ನಲಾದ ಕಳ್ಳರ ಗ್ಯಾಂಗ್ ಒಂದನ್ನು ಪತ್ತೆ ಹಚ್ಚುವಲ್ಲಿ ಗೋಕರ್ಣ ಪೊಲೀಸರು ಯಶಸ್ವೀ ಕಾರ್ಯಚರಣೆ ನಡೆಸಿದ್ದಾರೆ ಎನ್ನಲಾಗಿದ್ದು, ನಾಗರಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.   

ಅಂಕೋಲಾ ತಾಲೂಕಿನ ಬಬ್ರುವಾಡಾ ಗ್ರಾಪಂ ವ್ಯಾಪ್ತಿಯ ವಿವಿಧ ಮಜಿರೆಗಳ 2-3 ತರುಣರು, ಪುರಸಭೆ ವ್ಯಾಪ್ತಿಯ ಇನ್ನೋರ್ವ ಯುವಕ ಹಾಗೂ ಶಿರಸಿಯ 2 ಸೇರಿ ಈ ಗುಂಪಿನಲ್ಲಿ ಸುಮಾರು 6 ಯುವಕರಿರುವ ಸಾಧ್ಯತೆ ಕೇಳಿ ಬಂದಿದೆ. 

ಇತ್ತೀಚೆಗೆ ಗೋಕರ್ಣದ ಮನೆಯೊಂದರ ಕಳ್ಳತನವಾಗಿದ್ದು, ಕಳ್ಳರ ಪತ್ತೆಗೆ ಜಾಲ ಬೀಸಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯ ವಾಗಿತ್ತು ಎನ್ನಲಾಗಿದ್ದು,ಕಳ್ಳನೋರ್ವ ತಾನು ಕದ್ದ ಮೊಬೈಲ್ ನ್ನು  ಕೆಲ ದಿನಗಳ ಬಳಿಕ ಬಳಸಲು ಮುಂದಾಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುವಂತಾಯಿತು ಎನ್ನಲಾಗಿದೆ.

ಅಂಕೋಲಾ ಹಾಗೂ ಸಿರ್ಸಿ ಮೂಲದ ಈ ಯುವಕರ ತಂಡ, ಹಲವಾರು ಮನೆಕಳ್ಳತನ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕಳ್ಳರು ತಾವು ಕದ್ದ ಒಡವೆಗಳನ್ನು ಸ್ಥಳೀಯ ಪರಿಚಿತ ಚಿನ್ನದ ವ್ಯಾಪಾರಸ್ಥನ ಮೂಲಕ ಮಾರಾಟ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಈ ಹಿಂದಿನ ಕಳ್ಳ ಮಾಲು ಜಪ್ತಿ ಪಡಿಸಿಕೊಳ್ಳುವ್ರದು ಇಲಾಖೆಗೆ ಸಧ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ ಸವಾಲಿನ ಕೆಲಸ ಎನ್ನಲಾಗಿದೆ. 

ಆದರೆ ಇತ್ತೀಚೆಗೆ ಪೂಜಗೇರಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಶಿಕ್ಷಕ ದಂಪತಿಗಳ ಮನೆಯಿಂದ ಕದ್ದ ಚವತಿ ಗಣಪನ ಬ೦ಗಾರದ ಒಡವೆಗಳನ್ನು ಜಪ್ತಿ ಪಡಿಸಿಕೊಳ್ಳಲಾ ಗಿದೆ ಎನ್ನಲಾಗಿದ್ದು, ಈ ಕುರಿತು ಪೊಲೀಸರಿಂದ ಖಚಿತ ಮಾಹಿತಿ ದೊರೆಯ ಬೇಕಿದೆ. ಎಲ್ ಐ ಸಿ ಆಫೀಸರ್, ಪೊಲೀಸ್ ಅಧಿಕಾರಿಯ ಸಂಬಂಧಿಕರ ಮನೆ, ಶಿಂಗನಮಕ್ಕಿ ಮನೆಕಳ್ಳತನ, ರಾ.ಹೆ ಅಂಚಿನ ಹಲವು ಮತಿಗಳ್ಳತನ, ಶಾಲಾ ಅಡುಗೆ ಸಿಲೆಂಡರ್ ಕಳ್ಳತನ ಕೃತ್ಯ ಸೇರಿದಂತೆ ಇತರೆ ಹತ್ತಾರು ಕಳ್ಳತನ ಪ್ರಕರಣಗಳ ಅಸಲಿಯತ್ತನ್ನು ಪೊಲೀಸರು ಭೇದಿಸ ಬೇಕಿದೆ.             

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.   

    

Back to top button