ಕಾರವಾರ: ಕರೊನಾ ಸೋಂಕು ದೃಢಪಟ್ಟ, ಕಾರವಾರದ ಸದಾಶಿವಗಡ ಮೂಲದ , ಸದ್ಯ ಮುಂಬೈನಲ್ಲಿ ವಾಸವಿದ್ದ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆ 69 ವರ್ಷದ ಮೆಬಲ್ ಫರ್ನಾಂಡಿಸ್ ಎಂದು ತಿಳಿದುಬಂದಿದೆ. ಸದಾಶಿವಗಡದಲ್ಲಿ ಮನೆ ಹೊಂದಿರುವ ಮೆಬಲ್ ಕುಟುಂಬದವರು, ಮಕ್ಕಳದೊಂದಿಗೆ ಮುಂಬೈನಲ್ಲೇ ವಾಸವಿದ್ದರು. ಅಪರೂಪಕ್ಕೆ ಸದಾಶಿವಗಡದ ಮನೆಗೆ ಬಂದು ವಾಸಿಸುತ್ತಿದ್ದು, ಲಾಕ್‍ಡೌನ್ ಆರಂಭವಾಗುವ ಕೆಲ ದಿನಗಳ ಮೊದಲು, ಸದಾಶಿವಗಡದಿಂದ ಮುಂಬೈಗೆ ತೆರಳಿದ್ದರು. ಮೃತ ಮಹಿಳೆ 16 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
Idagunji Mahaganapati
ಇಷ್ಟಾರ್ಥ ಸಿದ್ಧಿಸುವ ಇಡಗುಂಜಿ ಮಹಾಗಣಪತಿ ದರ್ಶನ
By Vishnu Hegde