Uttara Kannada
Trending

ಜಿಲ್ಲೆಯಲ್ಲಿಂದು ಏಳು ಕರೊನಾ ಪಾಸಿಟಿವ್, ಯಾವ ತಾಲೂಕಿನಲ್ಲಿ ದಾಖಲಾಯ್ತು ಪ್ರಕರಣ

ಕಾರವಾರ: ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಜನರು ನಿಟ್ಟುಸಿರು ಬಿಡುತ್ತಿರುವಾಗಲೇ, ಇಂದು ಉತ್ತರಕನ್ನಡದಲ್ಲಿ ಒಟ್ಟು ಏಳು ಕೊರನಾ ಪ್ರಕರಣ ದೃಢಪಟ್ಟಿದೆ. ಯಲ್ಲಾಪುರದಲ್ಲಿ ಆರು, ಭಟ್ಕಳದಲ್ಲಿ ಒಂದು ಕರೊನಾ ಸೋಂಕು ಕಾಣಿಸಿಕೊಂಡಿದೆ. ಯಲ್ಲಾಪುರದಲ್ಲಿ ಸೋಂಕು ದೃಢಪಟ್ಟ ಆರೂ ಜನರು, ಮಹಾರಾಷ್ಟçದಿಂದ ಬಂದವರು ಎನ್ನಲಾಗಿದೆ. ಯಲ್ಲಾಪುರದ 62 ವರ್ಷದ ಪುರುಷ, 22 ವರ್ಷದ ಯುವಕ, 25 ವರ್ಷದ ಯುವತಿ, 10 ವರ್ಷದ ಬಾಲಕಿ, ಎಂಟು ವರ್ಷದ ಬಾಲಕ, 49 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಯಾದಂತಾಗಿದೆ.

Back to top button