Important
Trending

ಹೊನ್ನಾವರದಲ್ಲಿ ಇಂದು 13 ಕರೊನಾ ಪಾಸಿಟಿವ್

ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 414ಕ್ಕೆ ಏರಿಕೆ
110 ಸೋಂಕಿತರಿಗೆ ಹೋಮ್ ಐಸೋಲೇಷನ್

ಹೊನ್ನಾವರ: ತಾಲೂಕಿನಲ್ಲಿ ಕರೊನಾ ಸಂಖ್ಯೆ ಏರುತ್ತಲೇ ಇದೆ. ಇಂದು 13 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 414ಕ್ಕೆ ಏರಿಕೆಯಾಗಿದೆ. ಹೊನ್ನಾವರ ಪಟ್ಟಣ ಹಾಗೂ ತಾಲೂಕಿನಲ್ಲಿ ಸರಳಗಿ, ಮುಗ್ವಾ, ಜಲವಳ್ಳಕರ್ಕಿ, ವಲ್ಕಿ , ನಗರಬಸ್ತಿಕೇರಿ, ಬಳ್ಕೂರು, ಮೂಡ್ಕಣಿ ಬಾಗದಲ್ಲಿ ಕರೊನಾ ಪತ್ತೆಯಾಗಿದೆ. ಪಟ್ಟಣದಲ್ಲಿ ಎರಡು, ಬಳ್ಕೂರಿನಲ್ಲಿ ತಾಯಿ ಮತ್ತು ಎರಡು ವರ್ಷದ ಮಗು, ನಗರಬಸ್ತಿಕೇರಿಯಲ್ಲಿ 2, ಸರಳಗಿ-ಮುಗ್ವಾ-ವಲ್ಕಿ-ಜಲವಳ್ಳಕರ್ಕಿ- ಮೂಡ್ಕಣಿ-ಮತ್ತು ಸಿರಾಳಕೋಪ್ಪದ ತಲಾ ಒಬ್ಬರಲ್ಲಿ ಕರೊನಾ ಕಾಣಿಸಿಕೊಂಡಿದೆ.

ಹೊನ್ನಾವರ ಪಟ್ಟಣದ 64 ವರ್ಷದ ಪುರುಷ, ಕೆಳಗಿನಪಾಳ್ಯದ 65 ವರ್ಷದ ಮಹಿಳೆ, ಬಳ್ಕೂರಿನ 27 ವರ್ಷದ ಮಹಿಳೆ ಮತ್ತು ಆಕೆಯ ಎರಡು ವರ್ಷದ ಮಗು, ನಗರಬಸ್ತಿಕೇರಿಯ 55 ವರ್ಷದ ಪುರುಷ. 30 ವರ್ಷದ ಯುವಕ, ವಲ್ಕಿಯ 37 ವರ್ಷದ ಯುವಕ, ಜಲವಳ್ಳಕರ್ಕಿಯ 71 ವರ್ಷದ ಪುರುಷ, ಮುಗ್ವಾದ 44 ವರ್ಷದ ಪುರುಷ, ಮೂಡ್ಕಣಿಯ 45 ವರ್ಷದ ಪುರುಷ, ಸರಳಗಿಯ 80 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಶಿರಾಳಕೊಪ್ಪಾದ 38 ವರ್ಷದ ಮಹಿಳೆ ಆಸ್ಪತ್ರೆಗೆ ಆಪರೇಷನ್ ಗಾಗಿ ದಾಖಲಾಗಿದ್ದು, ಈಕೆಗೂ ಸೋಂಕು ದೃಢಪಟ್ಟಿದೆ.

ಇದೊಂದರಿಗೆ ಇಂದು ತಾಲೂಕಿನಲ್ಲಿ ಒಟ್ಟು 13 ಜನರಲ್ಲಿ ಸೋಂಕು ದೃಢಪಟ್ಟಿದೆ. ತಾಲೂಕಾ ಆಸ್ಪತ್ರೆಯಿಂದ ಆರು ಜನರು ಡಿಸ್ಚಾರ್ಜ್ ಆಗಿದ್ದು, ಆಸ್ಪತ್ರೆಯಲ್ಲಿ 19 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ 110 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button