Important
Trending

Bear Attack: ದನ ಮೇಯಿಸಲು ಹೋದಾಗ ಕರಡಿಗಳ ದಾಳಿ: ಸ್ನೇಹಿತ ಬಂದು ಉಳಿಸಿದ ಜೀವ

ಮುಂಡಗೋಡು: ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ( Bear Attack) ಮಾಡಿದ್ದು, ಅದೃಷ್ಟವಶಾತ್ ಆತ ಕರಡಿ ಹಿಂಡಿನಿoದ ಪಾರಾದ ಘಟನೆ ಮುಂಡಗೋಡ ತಾಲೂಕಿನ ಪಾಳಾ ಅರಣ್ಯದಲ್ಲಿ ನಡೆದಿದೆ. ಪಾಳಾ ಗ್ರಾಮದ ಚಿಕ್ಕಪ್ಪ ನಿಂಗಪ್ಪ ಮಾವುರ ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಅರಣ್ಯದಲ್ಲಿ ದನ ಮೇಯಿಸಲು ಹೋದಾಗ ಎರಡು ಮರಿ ಜೊತೆ ದೊಡ್ಡ ಕರಡಿ ಪ್ರತ್ಯಕ್ಷವಾಗಿ ಏಕಾಏಕಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದೆ.

ಈ ವೇಳೆ ಅವರು ಕೂಗಾಡಿದ್ದು, ಅಲ್ಲೇ ಪಕ್ಕದಲ್ಲಿ ದನ ಮೇಯಿಸುತ್ತಿದ್ದವರು ದೊಣ್ಣೆಯಿಂದ ಹೊಡೆದು ಕರಡಿಯನ್ನು ( Bear Attack) ಓಡಿಸಿದ್ದಾರೆ. ಈ ಘಟನೆಯ ಪರಿಣಾಮ ಚಿಕ್ಕಪ್ಪನಿಗೆ ಕೈ ಮತ್ತು ಎದೆಯ ಮೇಲೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button