Important
Trending

Bank manager: ಹಿಂಬದಿಯಿಂದ ಕಾರಿಗೆ ಡಿಕ್ಕಿ: ಬ್ಯಾಂಕ್ ಮ್ಯಾನೇಜರ್ ಸಾವು

ಕಾರವಾರ: ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದಲ್ಲಿ ಬ್ಯಾಂಕ್ ಮ್ಯಾನೇಜರ್ ಮೃತಪಟ್ಟಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರ ನಗರದ ಆರ್ ಟಿ ಓ ಕಚೇರಿ ಸಮೀಪದಲ್ಲಿ ಹಿಂಬದಿಯಿoದ ಕಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಕಾರವಾರ ಅರ್ಬನ್ ಬ್ಯಾಂಕ್ ಮ್ಯಾನೇಜರ್ ( Bank manager )ಗುರುದಾಸ್ ಬಾಂದೇಕರ್ (55) ಮೃತ ವ್ಯಕ್ತಿ.

ಸ್ಕೂಟರ್ ನಲ್ಲಿ ಹಾಫ್ ಹೆಲೆಟ್ ಧರಿಸಿ ವೇಗವಾಗಿ ಬಂದು ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿoದ ಡಿಕ್ಕಿ ಹೊಡೆದಿದ್ದು, ಈ ವೇಳೆ ಗುರುದಾಸ್ ( Bank manager ) ಅವರ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ತಕ್ಷಣ ಕಾರಿನ ಚಾಲಕ ಗಾಯಗೊಂಡ ಗುರುದಾಸ್ ಅವರನ್ನು ತಮ್ಮದೇ ಕಾರಿನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button