Big News
Trending

Missing Young Man: ನದಿಯಲ್ಲಿ ಮುಳುಗಿ ನಾಪತ್ತೆಯಾದ ಯುವಕನ ಪತ್ತೆಗಾಗಿ ಮನವಿ

ಕುಟುಂಬದವರ ಆಕ್ರಂದನ

ಹೊನ್ನಾವರ: ತಾಲೂಕಿನ ಹಡಿನಬಾಳ ಮೂಲದ ಅಮಿತ್ ಭಟ್ ಇವರು ತಲಕಾಡಿನ ನಿಸರ್ಗಧಾಮ ಪ್ರವಾಸಕ್ಕೆ ಸ್ನೇಹಿತರೊಂದಿಗೆ ತೆರಳಿ ನದಿಯಲ್ಲಿ ಮುಳುಗಿ ( Missing Young Man) ನಾಪತ್ತೆಯಾಗಿದ್ದಾರೆ. ಕೊಡಗು ಜಿಲ್ಲೆಯ ತಲಕಾಡು ನಿಸರ್ಗಧಾಮಕ್ಕೆ ಅಗಸ್ಟ 15ರ ಸ್ವಾತಂತ್ರ‍್ಯೊತ್ಸವ ರಜಾ ದಿನದಂದು ನಾಲ್ವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದರು. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಪಿ.ಎಲ್.ಡಿ ಬ್ಯಾಂಕ ಶಾಖಾ ವ್ಯವಸ್ಥಾಪಕರಾಗಿದ್ದ ಅಂಕೋಲಾ ಮೂಲದ ಮಂಡದಕೊಪ್ಪದ ವಿನೋದ ನಾಯಕ್ ಹಾಗೂ ಮಂಡ್ಯದ ಬೆಳ್ಳೂರು ಬಿಜಿಎಸ್ ಕಾಲೇಜಿನಲ್ಲಿ ಎಂಜನಿಯರಿoಗ್ ವಿದ್ಯಾರ್ಥಿಯಾದ ಹಡಿನಬಾಳದ ಅಮಿತ್ ನಾಪತ್ತೆಯಾಗಿದ್ದರು.

ವಿನೋದ ನಾಯಕ ಮೃತದೇಹ ಕಾವೇರಿಪುರದ ಪಂಪ್ ಬಳಿ ದೊರೆತಿದ್ದು, ಹಡಿನಬಾಳದ ಅಮಿತ್ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ. ತಲಕಾಡು ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ದಿನಗಳ ಕಾಲ ಪೊಲೀಸರು ಹಾಗೂ ಅಗ್ನಿಶಾಮಕದಳದವರು ಕಾರ್ಯಚರಣೆ ನಡೆಸಿದರು ಪ್ರಯೋಜನವಾಗಿಲ್ಲ. ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದ್ದು, ಅಮಿತ್ ಮೃತದೇಹವಾದರೂ ತರಿಸಿಕೊಡುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ

Back to top button